Select Your Language

Notifications

webdunia
webdunia
webdunia
webdunia

ಹಾಟ್ ನಟಿ ತಮನ್ನಾ ವಿಷಯ ಏನ್ ಗೊತ್ತಾ?

ಹಾಟ್ ನಟಿ ತಮನ್ನಾ ವಿಷಯ ಏನ್ ಗೊತ್ತಾ?
mumbai , ಬುಧವಾರ, 22 ನವೆಂಬರ್ 2023 (14:20 IST)
ಹಾಟ್ ನಟಿ ತಮನ್ನಾಳಿಗೆ ಮತ್ತೆ ತಮಿಳಿನಲ್ಲಿನಟಿಸುವ ಅವಕಾಶ ಹುಡುಕಿಕೊಂಡು ಬಂದಿದೆ. ಈ ಚಿತ್ರದ ಶೂಟಿಂಗ್ ಈಗ ಅಂತಿಮ ಹಂತಕ್ಕೆ ಬಂದಿದೆ. ಮತ್ತೊಂದು ಚಿತ್ರದಲ್ಲಿ ನಟಿಸುವ ಅವಕಾಶ ಆಕೆಗೆ ಸಿಕ್ಕಿದೆ. ಈ ಹೀರೋಯಿನ್ ಬೆಸ್ಟ್ ಫ್ರೆಂಡ್ ಆಗಿರುವ ಆರ್ಯ ಜೊತೆ ನಟಿಸುವ ಅವಕಾಶ ಪಡೆದಿದ್ದಾಳೆ ಈ ಚೆಲುವೆ.
 
ಸಾಮಾನ್ಯವಾಗಿ ಮುದ್ದಾಗಿದ್ದು, ಅಭಿನಯವು ಸಹ ಗೊತ್ತಿದ್ದರೆ ಕಲಾವಿದರಿಗೆ ಅವಕಾಶಗಳ ಕೊರತೆ ಇರುವುದಿಲ್ಲ. ಆರಂಭದಲ್ಲಿ ಯಾವ  ಭಾಷೆಯಲ್ಲಿ ಎಂಟ್ರಿ ಆದರು ಸಹ ಅಲ್ಲಿ ಅವರಿಗೆ ಅಕಸ್ಮಾತ್ ಯಶಸ್ಸು ಸಿಗದೇ ಇದ್ದರೂ ಅವರನ್ನು ಮತ್ತೊಂದು ಭಾಷೆ ಕರೆಯುತ್ತದೆ. ಹೀಗೆ ಬೇರೆ ಭಾಷೆಗಳಲ್ಲಿ ಗೆದ್ದವರು ಪುನಃ ಈ ಹಿಂದೆ ಸೋತ ಭಾಷೆಗಳಲ್ಲಿ ನಟಿಸಿ ಗೆದ್ದಿದ್ದಾರೆ. 
 
 
ಅಂತಹ ಲಿಸ್ಟ್ ನಲ್ಲಿ ಅನುಷ್ಕ, ಇಲಿಯಾನ, ತಮನ್ನ  ಸೇರ್ಪಡೆ ಆಗುತ್ತಾರೆ. ತಮನ್ನ ವಿಷಯಕ್ಕೆ ಬರುವುದಾದರೆ ಆಕೆ ಕೇಡಿ ಎನ್ನುವ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಆದರು. ಆ ಚಿತ್ರದಿಂದ ಆಕೆಗೆ ಗೆಲುವು ಕಾಣಲಿಲ್ಲ. ಅದಾದ ಬಳಿಕ ತೆಲುಗಿನ ಹ್ಯಾಪಿ ಡೇಸ್ ಚಿತ್ರದಲ್ಲಿ ನಟಿಸಿ ಎಲ್ಲರ ಮನ ಗೆದ್ದಳು ತಮ್ಮು. ಆಕೆಯನ್ನು ಪುನಃ  ಕಾಲಿವುಡ್ ಆಹ್ವಾನಿಸಿತು. 
 
ಇಲ್ಲಿಯೂ ಸಹಿತ ಆಕೆಗೆ ಗೆಲುವು ಕೈ ಹಿಡಿಯಿತು. ಅದಾದ ಬಳಿಕ ಮತ್ತೆ ತೆಲುಗಿಗೆ ಬಂದ ತಮ್ಮುಗೆ ಅನೇಕ ಅವಕಾಶಗಳು ಹುಡುಕಿಕೊಂಡು ಬಂದವು. ಅದೇರೀತಿ ಬಾಲಿವುಡ್ ನಲ್ಲೂ ಸಹಿತ ಆಕೆಯು ಗೆಲ್ಲಲಿಲ್ಲ .  ಈಗ ಆಕೆಗೆ ಟಾಲಿವುಡ್ ನಲ್ಲಿ ಅವಕಾಶಗಳು ಕಡಿಮೆ ಆಗಿದೆ. ಆದರೆ ಕಾಲಿವುಡ್ ಕೈ ಹಿಡಿದಿದೆ. 
 
ಎಂ ರಾಜೇಶ್ ಅವರ ನಿರ್ದೇಶನದ ಈ ಚಿತ್ರ ಇದೆ ತಿಂಗಳು   ಶೂಟಿಂಗ್ ಆರಂಭ ಮಾಡಲಿದೆ. ಇದರಲ್ಲಿ ಹಾಸ್ಯ ಕಲಾವಿದ ಸಂತಾನಂ ಮುಖ್ಯ ಪಾತ್ರಧಾರಿ ಆಗಿದ್ದಾರೆ. ಈ ಮುಖಾಂತರ ತಮನ್ನ ಕಾಲಿವುಡ್ ಯುಗ ಮತ್ತೆ ಆರಂಭ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನೋಡಿ ಹಾಡಿ ಹೊಗಳಿದ ಕಿಚ್ಚ ಸುದೀಪ್