Select Your Language

Notifications

webdunia
webdunia
webdunia
webdunia

ಸೆಲೆಬ್ರಿಗಳನ್ನು ಖುದ್ದು ಮದ್ವೆಗೆ ಆಹ್ವಾನಿಸುತ್ತಿರುವ ರಾಧಿಕಾ- ಅನಂತ್ ಮದುವೆ ಹೇಗಿರಲಿದೆ ಗೊತ್ತಾ

Radhika Ananth Ambani Marriage Inivitation

Sampriya

ಮುಂಬೈ , ಗುರುವಾರ, 27 ಜೂನ್ 2024 (18:54 IST)
Photo Courtesy X
ಮುಂಬೈ:  ಜುಲೈ 12 ರಂದು ರಾಧಿಕಾ ಮರ್ಚೆಂಟ್ ಅವರನ್ನು ಮದುವೆಯಾಗಲಿರುವ ಅನಂತ್ ಅಂಬಾನಿ ಅವರು ಸ್ವತಃ ಸೆಲೆಬ್ರಿಟಿಗಳ ಮನೆಗೆ ತೆರಳಿ ಮದುವೆಗೆ ಆಹ್ವಾನಿಸುತ್ತಿದ್ದಾರೆ.

ವಿವಾಹ ಪೂರ್ವ ಆಚರಣೆಯಲ್ಲಿ ಸ್ಟಾರ್ ಸೆಲೆಬ್ರಿಟಿಗಳು ಭಾಗಿಯಾಗಿ ತಮ್ಮ ಮನೆ ಮದುವೆಯಂತೆ ಪಾಲ್ಗೊಂಡು ಎಂಜಾಯ್ ಮಾಡಿದ್ದರು. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗಳು ಭಾರೀ ವೈರಲ್ ಆಗಿತ್ತು.

ಇದೀಗ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ರಾಧಿಕಾ ಹಾಗೂ ಅನಂತ್ ಅಂಬಾನಿ ಸೆಲೆಬ್ರಿಗಳ ಮನೆಗೆ ಖುದ್ದು ಹೋಗಿ ಆಹ್ವಾನಿಸುತ್ತಿದ್ದಾರೆ. ಅದರಂತೆ ಅಕ್ಷಯ್ ಮನೆಗೆ ಭೇಟಿ ನೀಡಿದ್ದಾರೆ.

ಅದಲ್ಲದೆ ಬಾಲಿವುಡ್‌ನ ಸ್ಟಾರ್‌ಗಳಾದ  ಅಜಯ್ ದೇವಗನ್ ಮತ್ತು ಕಾಜೋಲ್ ಸೇರಿದಂತೆ ಅನೇಕ ಸ್ಟಾರ್‌ ನಟ ನಟಿಯರನ್ನು ಈ ಜೋಡಿ ಆಹ್ವಾನಿಸಿದೆ.

ವೈರಲ್ ಆಮಂತ್ರಣದ ವರದಿಗಳ ಪ್ರಕಾರ, ಜುಲೈ 12, 2024 ರಂದು ಅನಂತ್ ಮತ್ತು ರಾಧಿಕಾ ಅವರ ವಿವಾಹ ಮಹೋತ್ಸವಗಳು ಮೂರು ದಿನಗಳ ಕಾಲ ನಡೆಯಲಿವೆ. ಮುಕೇಶ್ ಅಂಬಾನಿ ಒಡೆತನದ ಮುಂಬೈನ ಬಿಕೆಸಿಯಲ್ಲಿರುವ ಪ್ರತಿಷ್ಠಿತ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಈ ಆಚರಣೆಯನ್ನು ಆಯೋಜಿಸಲಿದೆ. ಜುಲೈ 13 ರಂದು 'ಆಶೀರ್ವಾದ ಸಮಾರಂಭ,' ನಂತರ 'ಮಂಗಲ ಉತ್ಸವ' ಅಥವಾ ಜುಲೈ 14 ರಂದು ಸ್ವಾಗತ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿ ಗ್ಯಾಂಗ್‌ನಿಂದ ಹತ್ಯೆಯಾದ ರೇಣುಕಾಸ್ವಾಮಿ ಹೆಸರಿನಲ್ಲಿ ವಿಕಿಪಿಡಿಯಾ ಪೇಜ್