Select Your Language

Notifications

webdunia
webdunia
webdunia
webdunia

ಪ್ರಭಾಸ್ ಚಿತ್ರದಲ್ಲಿ ನಟಿಸಲು ಹೊಸಬರಿಗೆ ಅವಕಾಶ ನೀಡುತ್ತಿರುವ ನಿರ್ದೇಶಕರು

ಪ್ರಭಾಸ್ ಚಿತ್ರದಲ್ಲಿ ನಟಿಸಲು ಹೊಸಬರಿಗೆ ಅವಕಾಶ ನೀಡುತ್ತಿರುವ ನಿರ್ದೇಶಕರು
ಹೈದರಾಬಾದ್ , ಗುರುವಾರ, 11 ಫೆಬ್ರವರಿ 2021 (11:08 IST)
ಹೈದರಾಬಾದ್ : ನಟ ಪ್ರಭಾಸ್ ಅವರು ‘ರಾಧೆಶ್ಯಾಮ್’ ಚಿತ್ರ ಮುಗಿಸಿ ಪ್ರಶಾಂತ್ ನೀಲ್ ಅಭಿನಯದ ‘ಸಲಾರ್’ ಚಿತ್ರತಂಡವನ್ನು ಸೇರಿದ್ದಾರೆ.

ಆದರೆ ಈ ನಡುವೆ ಪ್ರಭಾಸ್ ನಾಗ್ ಅಶ್ವಿನ್ ಅವರ ಜೊತೆ ದೊಡ್ಡ ಚಿತ್ರ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ. ಇದು ಥ್ರಿಲ್ಲರ್ ಚಿತ್ರವಾಗಿದ್ದು, ಇದರಲ್ಲಿ ಪ್ರಭಾಸ್ ನಾಯಕನಾಗಿ ನಟಿಸಲಿದ್ದಾರೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಸಲಿದ್ದಾರೆ.

ಈ ನಡುವೆ ನಾಗ್ ಅಶ್ವಿನ್ ಅವರು ಚಿತ್ರಕ್ಕೆ ಹೊಸ ನಟರನ್ನು ಬಯಸುತ್ತಿದ್ದು, ಅದಕ್ಕಾಗಿ ಮಾರ್ಷಲ್ ಆರ್ಟ್, ಜಿಮ್ನಾಸ್ಟಿಕ್ಸ್ ತಿಳಿದಿರುವ 20-35 ವರ್ಷದೊಳಗಿನ ಪುರುಷರು ಹಾಗೂ ಕಲೆಗಳ ಪರಿಚಯವಿರುವ 9-14 ವರ್ಷದೊಳಗಿನ ಹುಡುಗಿಯರು ಬೇಕಾಗಿದ್ದಾರೆ ಎಂದು ಘೋಷಿಸಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಷೇಕ್ ಅಂಬರೀಶ್ ಜೊತೆ ರಚಿತಾ ರಾಂ ರೊಮ್ಯಾನ್ಸ್