Publish Date: Wed, 10 Feb 2021 (11:47 IST)
Updated Date: Wed, 10 Feb 2021 (11:48 IST)
ಹೈದರಾಬಾದ್ : ತೆಲುಗು ನಟ ಅಲ್ಲು ಅರ್ಜುನ್ ಅವರ ಫಾಲ್ಕನ್ ಎನ್ನುವ ಅದ್ದೂರಿ ಕಾರವಾನ್ ಶನಿವಾರದಂದು ಖಮ್ಮಂ ಬಳಿ ಅಪಘಾತಕ್ಕೀಡಾಗಿದೆ.
ಪುಷ್ಪಾ ಚಿತ್ರದ ಶೂಟಿಂಗ್ ಮುಗಿಸಿ ಬರುತ್ತಿದ್ದ ವೇಳೆ ಹಿಂಬದಿಯಿಂದ ಕಂಟೈನರ್ ಲಾರಿ ಡಿಕ್ಕಿ ಹೊಡೆದಿದ್ದು, ವಾಹನ ನಜ್ಜುಗುಜ್ಜಾಗಿದೆ ಎನ್ನಲಾಗಿದೆ. ಆ ವೇಳೆ ಅಲ್ಲು ಅರ್ಜುನ್ ಅವರು ಇರಲಿಲ್ಲ, ಅವರ ಮೇಕಪ್ ತಂಡವಿದ್ದು ಯಾವುದೇ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಈ ಕಾರವಾನ್ ಬೆಲೆ 7ಕೋಟಿ ಎನ್ನಲಾಗಿದೆ.