ಚೆನ್ನೈ : ನಟ ಸೂರ್ಯ ಅಭಿನಯದ ಚಿತ್ರ ಸೂರರೈ ಪೊಟ್ರು ಕಳೆದ ವರ್ಷ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡಿದೆ. ಈ ಚಿತ್ರವನ್ನು ನಿರ್ದೇಶಕಿ ಸುಧಾ ಕೊಂಗರಾ ಅವರು ನಿರ್ದೇಶಿಸಿದ್ದು, ಇದೀಗ ಪ್ರೇಕ್ಷಕರು ಸುಧಾ ಕೊಂಗರಾ ಅವರ ಮುಂದಿನ ಚಿತ್ರದ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.
ಇದೀಗ ಸುಧಾ ಕೊಂಗರಾ ಅವರ ಮುಂದಿನ ಚಿತ್ರದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಮುಂದಿನ ಚಿತ್ರದ ತಯಾರಿಗೆ ಸಿದ್ಧವಾಗಿದ್ದಾರೆ. ಮೂಲಗಳ ಪ್ರಕಾರ ಅವರು ಒಂದೆರಡು ದಿನಗಳಲ್ಲಿ ಸ್ಟಾರ್ ಹೀರೋ ಅವರೊಂದಿಗೆ ತಮ್ಮ ಮುಂದಿನ ಚಿತ್ರವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎನ್ನಲಾಗಿದೆ. ಆದರೆ ತಮಿಳು ನಟರೊಂದಿಗೆ ಚಿತ್ರ ಮಾಡುತ್ತಾರೋ? ಅಥವಾ ತೆಲುಗು ನಟರೊಂದಿಗೆ ಚಿತ್ರ ಮಾಡುತ್ತಾರೆಯೇ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.