ಕೊಚ್ಚಿ: ನಟಿ ಮೇಲೆ ಆಕ್ರಮಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಮಲಯಾಳಂ ನಟ ದಿಲೀಪ್ ನಿವಾಸದ ಮೇಲೆ ನಿನ್ನೆ ಕ್ರೈಂ ಬ್ರ್ಯಾಂಚ್ ಪೊಲೀಸರು ದಾಳಿ ನಡೆಸಿದ್ದಾರೆ.
									
			
			 
 			
 
 			
			                     
							
							
			        							
								
																	ದಿಲೀಪ್ ತನಿಖಾಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಲಯಾಳಂ ನಿರ್ದೇಶಕ ಬಾಲಚಂದರ್ ಇತ್ತೀಚೆಗೆ ಆರೋಪಿಸಿದ್ದರು. ಹೀಗಾಗಿ ಈ ವಿಚಾರದ ಬಗ್ಗೆ ತನಿಖಾ ತಂಡ ತನಿಖೆ ನಡೆಸುತ್ತಿದೆ.
									
										
								
																	ಇದಕ್ಕೆ ಸೂಕ್ತ ಸಾಕ್ಷ್ಯ ಸಂಗ್ರಹಿಸಲು ದಿಲೀಪ್ ಮತ್ತು ಅವರ ಸಹೋದರನ ನಿವಾಸಕ್ಕೆ ದಾಳಿಯಿಟ್ಟ ಪೊಲೀಸರು ದಿಲೀಪ್ ಅವರಿಗೆ ಸೇರಿದ ಮೊಬೈಲ್, ಹಾರ್ಡ್ ಡಿಸ್ಕ್ ಸೇರಿದಂತೆ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.