Webdunia - Bharat's app for daily news and videos

Install App

ನಿಮ್ದು ಇಟ್ಕೊಂಡು ನಮ್ ಬಾಸ್ ಗೇ ಟಾಂಗ್ ಕೊಡ್ತೀರಾ: ಧ್ರುವ ಸರ್ಜಾಗೆ ದರ್ಶನ್ ಫ್ಯಾನ್ಸ್ ಟಾಂಗ್

Krishnaveni K
ಬುಧವಾರ, 11 ಸೆಪ್ಟಂಬರ್ 2024 (09:09 IST)
Photo Credit: Facebook
ಬೆಂಗಳೂರು: ನಟ ದರ್ಶನ್ ಅಭಿಮಾನಿಗಳು ಮತ್ತೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೇಲೆ ಕಿಡಿಕಾರಿದ್ದಾರೆ. ಇದೀಗ ಧ್ರುವ ಮ್ಯಾನೇಜರ್ ಅರೆಸ್ಟ್ ಆಗಿರುವ ವಿಚಾರ ಇಟ್ಟುಕೊಂಡು ಟ್ರೋಲ್ ಮಾಡುತ್ತಿದ್ದಾರೆ.

ಮೊನ್ನೆಯಷ್ಟೇ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಧ್ರುವ ಸರ್ಜಾ ‘ನಮ್ಮ ಫಸ್ಟ್ ಸರ್ಕಲ್ ಯಾವತ್ತೂ ಚೆನ್ನಾಗಿರಬೇಕು. ಅಂತಹವರನ್ನು ಜೊತೆಯಲ್ಲಿಟ್ಟುಕೊಳ್ಳಲೇಬಾರದು. ನಾನು ನನ್ನ ಅಭಿಮಾನಿಗಳೊಂದಿಗಾದರೂ ಅಷ್ಟೇನೇ. ಅವರು ಒಳ್ಳೆ ಕೆಲಸ ಮಾಡ್ತಿಲ್ಲ ಎಂದರೆ ನೇರವಾಗಿ ಹೇಳಿಬಿಡ್ತೀನಿ’ ಎಂದೆಲ್ಲಾ ಧ್ರುವ ಹೇಳಿದ್ದರು.

ಇದು ನಟ ದರ್ಶನ್ ಗೆ ಕೊಟ್ಟ ಟಾಂಗ್ ಎಂದೇ ಎಲ್ಲರೂ ಅಂದುಕೊಂಡಿದ್ದರು. ಇದೀಗ ಹಲ್ಲೆ ಪ್ರಕರಣದಲ್ಲಿ ಧ್ರುವ ಸರ್ಜಾ ಆಪ್ತ ಅಶ್ವಿನ್ ಅರೆಸ್ಟ್ ಆಗಿದ್ದಾನೆ. ಇದೇ ವ್ಯಕ್ತಿಗೆ ಧ್ರುವ ಕಳೆದ ವರ್ಷ ದುಬಾರಿ ಕಾರು ಖರೀದಿ ಮಾಡಿದ್ದರು. ಅಷ್ಟರಮಟ್ಟಿಗೆ ಇಬ್ಬರ ನಡುವೆ ಆಪ್ತತೆಯಿತ್ತು. ಆದರೆ ಧ್ರುವ ಜೊತೆ ಜಿಮ್ ಟ್ರೈನರ್ ಪ್ರಶಾಂತ್ ಆಪ್ತರಾಗಿದ್ದು ಸಹಿಸದೇ ಈತ ಮತ್ತು ಇಬ್ಬರು ಸೇರಿಕೊಂಡು ಹಲ್ಲೆ ನಡೆಸಿದ್ದರು.

ಈ ಪ್ರಕರಣವನ್ನಿಟ್ಟುಕೊಂಡು ಈಗ ದರ್ಶನ್ ಫ್ಯಾನ್ಸ್ ಧ್ರುವನನ್ನು ಟ್ರೋಲ್ ಮಾಡುತ್ತಿದ್ದಾರೆ. ನಿಮ್ಮದೇ ಇಟ್ಕೊಂಡು ನಮ್ ಬಾಸ್ ಬಗ್ಗೇನೇ ಕಾಮೆಂಟ್ ಮಾಡ್ತೀರಾ? ಹೆಚ್ಚು ಮೆರೀಬಾರ್ದು ಎಂದು ಇದಕ್ಕೇ ಹೇಳೋದು ಎಂದು ಧ್ರುವಗೆ ಟಾಂಗ್ ಕೊಡುತ್ತಿದ್ದಾರೆ. ಒಟ್ಟಿನಲ್ಲಿ ಧ್ರುವ ಮೇಲೆ ದರ್ಶನ್ ಫ್ಯಾನ್ಸ್ ಹರಿಹಾಯಲು ಒಳ್ಳೆ ಕಾರಣ ಸಿಕ್ಕಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments