ಬೆಂಗಳೂರು: ದಾವಣಗೆರೆಯಲ್ಲಿ ನಿನ್ನೆ ಸಂಜೆ ನಡೆದ ಪೊಗರು ಅಡಿಯೋ ಲಾಂಚ್ ವೇಳೆ ಅಣ್ಣ ಚಿರಂಜೀವಿ ಸರ್ಜಾ ನೆನೆದು ಧ್ರುವ ಸರ್ಜಾ ಭಾವುಕರಾದ ಘಟನೆ ನಡೆದಿದೆ.
ಯಾವತ್ತೂ ಫಸ್ಟ್ ಡೇ ಫಸ್ಟ್ ಶೋ ಅಣ್ಣನ ಜೊತೆ ನೋಡ್ತಿದ್ದೆ. ಆದರೆ ಈ ಸಲ ಅಣ್ಣ ಇಲ್ಲ. ಅವನ ಸ್ಥಾನ ತುಂಬಲು ಯಾರಿಗೂ ಸಾಧ‍್ಯವಿಲ್ಲ. ಈ ಸಲ ನನ್ನ ಗಾಡ್ ಫಾದರ್ ಅರ್ಜುನ್ ಅಂಕಲ್ ಜೊತೆ ನೋಡ್ತೀನಿ. ನೀವೆಲ್ಲಾ ಸಿನಿಮಾ ನೋಡಿ ನನಗೆ ಹಾರೈಸಿ. ನಮಗೆ ತೋರಿದ ಪ್ರೀತಿ ನಮ್ಮ ಬೇಬಿ ಚಿರು ಸರ್ಜಾ ಮೇಲೂ ಇರಲಿ ಎಂದು ಧ್ರುವ ಅಡಿಯೋ ಲಾಂಚ್ ವೇಳೆ ಹೇಳಿದ್ದಾರೆ.