Publish Date: Mon, 05 Jul 2021 (09:27 IST)
Updated Date: Mon, 05 Jul 2021 (09:28 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ದಂಪತಿ ನಿನ್ನೆ ವಿನಯ್ ಗುರೂಜಿಯವನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ನಿನ್ನೆ ವಿನಯ್ ಗುರೂಜಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಆಶೀರ್ವಾದ ಪಡೆದಿದ್ದಾರೆ.
ಮೊನ್ನೆಯಷ್ಟೇ ಧ್ರುವ ಮಾವ, ನಟ ಅರ್ಜುನ್ ಸರ್ಜಾ ಚೆನ್ನೈನಲ್ಲಿ ನಿರ್ಮಿಸಿರುವ ಆಂಜನೇಯ ಸ್ವಾಮಿ ದೇವಾಲಯ ಕುಂಭಾಭಿಷೇಕ ಕಾರ್ಯಕ್ರಮಕ್ಕೆ ವಿನಯ್ ಗುರೂಜಿ ಆಗಮಿಸಿದ್ದರು. ಈ ಕಾರ್ಯಕದಲ್ಲಿ ಧ್ರುವ ದಂಪತಿ ಕೂಡಾ ಭಾಗಿಯಾಗಿದ್ದರು. ಇದಾದ ಬಳಿಕ ಮತ್ತೆ ಅವರು ವಿನಯ್ ಗುರೂಜಿಯವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.