Select Your Language

Notifications

webdunia
webdunia
webdunia
webdunia

ಅಣ್ಣನ ಫೋಟೋಗೆ ಮಗನ ಮುತ್ತಿಕ್ಕಿಸಿ ಭಾವುಕರಾದ ಧ್ರುವ ಸರ್ಜಾ

ಅಣ್ಣನ ಫೋಟೋಗೆ ಮಗನ ಮುತ್ತಿಕ್ಕಿಸಿ ಭಾವುಕರಾದ ಧ್ರುವ ಸರ್ಜಾ
ಬೆಂಗಳೂರು , ಗುರುವಾರ, 22 ಅಕ್ಟೋಬರ್ 2020 (11:52 IST)
ಬೆಂಗಳೂರು: ನಟಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದು, ಸರ್ಜಾ ಫ್ಯಾಮಿಲಿ ಬಹಳ ದಿನಗಳ ನಂತರ ಖುಷಿಯಲ್ಲಿದೆ. ಆದರೆ ಈ ಸಂಭ್ರಮವನ್ನು ನೋಡಲು ಚಿರು ಜತೆಗಿಲ್ಲವಲ್ಲಾ ಎಂಬ ನೋವು ಕುಟುಂಬಸ್ಥರಲ್ಲಿದೆ.

 
ಮಗುವನ್ನು ಮೊದಲ ಬಾರಿಗೆ ಎತ್ತಿಕೊಂಡು ಎದೆಗಾನಿಸಿಕೊಂಡ ಧ್ರುವ ಅಕ್ಷರಶಃ ಭಾವುಕರಾಗಿದ್ದಾರೆ. ಅಲ್ಲದೆ, ಮಗುವನ್ನು ಅಣ್ಣನ ಬೃಹತ್ ಭಾವಚಿತ್ರದ ಮುಂದೆ ಹಿಡಿದು ಭಾವುಕರಾದರು. ಇಡೀ ಸರ್ಜಾ ಕುಟುಂಬವೇ ಆಸ್ಪತ್ರೆಯಲ್ಲಿ ನೆರೆದಿದ್ದು, ಮೇಘನಾ ಜತೆಗಿದೆ. ಇನ್ನು, ಆಸ್ಪತ್ರೆಯ ಹೊರಗಡೆ ಸರ್ಜಾ ಅಭಿಮಾನಿಗಳು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ರಾಧೆ ಶ್ಯಾಮ’ ಚಿತ್ರದಲ್ಲಿ ಪ್ರಭಾಸ್ ಪಾತ್ರದ ಹೆಸರು ರಿವಿಲ್ ಮಾಡಿ ಟ್ವಿಸ್ಟ್ ನೀಡಿದ ಚಿತ್ರತಂಡ