Publish Date: Fri, 25 Sep 2020 (21:05 IST)
Updated Date: Fri, 25 Sep 2020 (21:07 IST)
ಬಾಲಿವುಡ್ ಡ್ರಗ್ ಲಿಂಕ್ ನಲ್ಲಿ ಖ್ಯಾತ ನಟಿ ದೀಪಿಕಾ ಪಡುಕೋಣೆ ಹೆಸರು ಕೇಳಿಬರುತ್ತಿದೆ.
ಈ ನಡುವೆ ಒಂದೆಡೆ, ಎನ್ ಸಿ ಬಿಯ ತನಿಖೆ ನಡೆಯುತ್ತಿದೆ. ಮತ್ತೊಂದೆಡೆ ದೀಪಿಕಾ ಪಡುಕೋಣೆ ಅವರ ನಿವಾಸವನ್ನು ಪೊಲೀಸ್ ತಂಡ ಸುತ್ತುವರೆದಿದೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಎದುರು ಡ್ರಗ್ ಲಿಂಕ್ ಕೇಸ್ ತನಿಖೆ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ನಟಿ ದೀಪಿಕಾ ಪಡುಕೋಣೆ ಹಾಜರಾಗಲಿದ್ದಾರೆ.
ಎನ್‌ಸಿಬಿ ಕಚೇರಿಯ ಹೊರಗೆ ಮಾಧ್ಯಮಗಳು ಹೆಚ್ಚಿದ್ದು ವ್ಯವಸ್ಥಿತವಾಗಿಲ್ಲ. ಆದ್ದರಿಂದ, ದೀಪಿಕಾ ಪಡುಕೋಣೆ ಅವರ ಮನೆಯ ಹೊರಗೆ ಭದ್ರತಾ ತಂಡವನ್ನು ನಿಯೋಜಿಸಲಾಗಿದೆ.
ಏತನ್ಮಧ್ಯೆ, ದೀಪಿಕಾ ಹ್ಯಾಶ್ ಕೇಳುವ ಚಾಟ್ ಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಕೋಲಾಹಲವನ್ನು ಸೃಷ್ಟಿಸಿವೆ. ಚಾಟ್‌ಗಳಲ್ಲಿ, ಯೆ ಜವಾನಿ ಹೈ ದಿವಾನಿ ನಟಿ ಹ್ಯಾಶ್ ಕೇಳುತ್ತಿರುವುದು ಸ್ಪಷ್ಟವಾಗಿದೆ.