Select Your Language

Notifications

webdunia
webdunia
webdunia
webdunia

ಇಂದಿರಾಗಾಂಧಿ ಪಾತ್ರದಲ್ಲಿ ನಟಿಸಿದ ಕಂಗನಾ 'ಎಮರ್ಜೆನ್ಸಿ' ಸಿನಿಮಾ ತೆರೆಗೆ ಬರಲು ಡೇಟ್ ಫಿಕ್ಸ್‌

ಇಂದಿರಾಗಾಂಧಿ ಪಾತ್ರದಲ್ಲಿ ನಟಿಸಿದ ಕಂಗನಾ 'ಎಮರ್ಜೆನ್ಸಿ' ಸಿನಿಮಾ ತೆರೆಗೆ ಬರಲು ಡೇಟ್ ಫಿಕ್ಸ್‌

Sampriya

ಮುಂಬೈ , ಮಂಗಳವಾರ, 25 ಜೂನ್ 2024 (19:26 IST)
Photo Courtesy X
ಮುಂಬೈ: ಮಂಡಿ ಸಂಸದೆ, ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಅಭಿನಯಿಸಿರುವ ಬಹುನಿರೀಕ್ಷಿತ  ಎಮರ್ಜೆನ್ಸಿ ಸಿನಿಮಾ ಕೊನೆಗೆ ತೆರೆಮೇಲೆ ಬರಲು ದಿನಾಂಕ ಫಿಕ್ಸ್ ಆಗಿದೆ.

ಲೋಕಸಭೆ ಚುನಾವಣೆ ಹಿನ್ನೆಲೆ ಮುಂದೂಡಲಾಗಿದ್ದ ಎಮರ್ಜೆನ್ಸಿ ಸಿನೆಮಾ  ಅಂತಿಮವಾಗಿ ಸೆಪ್ಟೆಂಬರ್ 6, 2024 ರಂದು ಬಿಡುಗಡೆಯಾಗುತ್ತಿದೆ.

1975 ರಲ್ಲಿ ಆಗಿನ ಭಾರತ ಸರ್ಕಾರವು ಜಾರಿಗೊಳಿಸಿದ ಎಮರ್ಜೆನ್ಸಿ ಕುರಿತಾದ ಕಥೆಯನ್ನು ಸಿನಿಮಾದಲ್ಲಿ ಒಳಗೊಂಡಿದೆ.  ಬಹು ವಿಳಂಬದ ನಂತರ, ಚಲನಚಿತ್ರವು ಅಂತಿಮವಾಗಿ ಸೆಪ್ಟೆಂಬರ್ 6, 2024 ರಂದು ಬಿಡುಗಡೆಯಾಗುತ್ತಿದೆ. ''ಸ್ವತಂತ್ರ ಭಾರತದ 50 ನೇ ವರ್ಷದ ಕರಾಳ ಅಧ್ಯಾಯದ ಆರಂಭ, 6 ನೇ ಸೆಪ್ಟೆಂಬರ್ 2024 ರಂದು  ಎಂದು ಪೋಸ್ಟ್ ಮಾಡಲಾಗಿದೆ.

ಕಂಗನಾ ರಣಾವತ್ ಬರೆದು ನಿರ್ದೇಶಿಸಿದ 'ಎಮರ್ಜೆನ್ಸಿ' ಚಿತ್ರದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಜೀ ಸ್ಟುಡಿಯೋಸ್ ಮತ್ತು ಮಣಿಕರ್ಣಿಕಾ ಫಿಲ್ಮ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಸಂಚಿತ್ ಬಲ್ಹರಾ ಅವರ ಸಂಗೀತ ಮತ್ತು ರಿತೇಶ್ ಶಾ ಅವರ ಚಿತ್ರಕಥೆ ಮತ್ತು ಸಂಭಾಷಣೆ ಇದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜೀವನದ ಸುತ್ತ ಚಿತ್ರ ಸುತ್ತುತ್ತದೆ ಮತ್ತು ಕಂಗನಾ ದಿವಂಗತ ರಾಜಕಾರಣಿ ಇಂದಿರಾ ಗಾಂಧಿ ಪಾತ್ರಕ್ಕೆ ಜೀವ ತುಂಬಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಜೈಲು ಸೇರಿದ ದಾಸ, ಬಿಗ್‌ಬಾಸ್ ಖ್ಯಾತಿಯ ವಿನಯ್‌ಗೆ ಹೊಸ ತಲೆಬಿಸಿ