Publish Date: Wed, 25 Dec 2019 (07:55 IST)
Updated Date: Wed, 25 Dec 2019 (07:58 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಖುಷಿಪಡಲು ಇಂದು ಮತ್ತೊಂದು ಕಾರಣ ಸಿಕ್ಕಿದೆ. ಡಿ ಬಾಸ್ ಅಭಿನಯದ ರಾಬರ್ಟ್ ಸಿನಿಮಾದ ಫಸ್ಟ್ ಲುಕ್ ಇಂದು ಬಿಡುಗಡೆಯಾಗುತ್ತಿದೆ.
ಒಡೆಯ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ದರ್ಶನ್ ಅಭಿಮಾನಿಗಳಿಗೆ ಇಂದು ರಾಬರ್ಟ್ ಉಡುಗೊರೆ ಸಿಗಲಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರೈಸಿರುವ ಚಿತ್ರತಂಡ ಇಂದು ಈ ಸಿನಿಮಾದಲ್ಲಿ ದರ್ಶನ್ ಲುಕ್ ರಿವೀಲ್ ಮಾಡಲಿದೆ.
ತರುಣ್ ಸುಧೀರ್ ನಿರ್ದೇಶನದ ಸಿನಿಮಾದಲ್ಲಿ ದರ್ಶನ್ ಜತೆಗೆ ವಿನೋದ್ ಪ್ರಭಾಕರ್ ಕೂಡಾ ಪ್ರಮುಖ ಪಾತ್ರ ವಹಿಸಿದ್ದಾರೆ. ಆಶಾ ಭಟ್ ಚಿತ್ರದ ನಾಯಕಿ.