ದರ್ಶನ್ ಗೆ ಇಂದು ಜಾಮೀನು ಸಿಕ್ಕರೆ ನೇರವಾಗಿ ಅವರು ಹೋಗುವ ಸ್ಥಳ ಇಲ್ಲಿಗೆ

Krishnaveni K
ಬುಧವಾರ, 30 ಅಕ್ಟೋಬರ್ 2024 (08:47 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆ ಇಂದು ಆರೋಗ್ಯದ ದೃಷ್ಟಿಯಿಂದ ಮಧ್ಯಂತರ ಜಾಮೀನು ಸಿಗುವ ನಿರೀಕ್ಷೆಯಿದೆ. ಜಾಮೀನು ಸಿಕ್ಕರೆ ತಕ್ಷಣವೇ ಅವರು ಎಲ್ಲಿಗೆ ಹೋಗುತ್ತಾರೆ ಎಂಬುದು ಗೊತ್ತಾಗಿದೆ.

ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರ ಆರೋಗ್ಯದ ಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ನ್ಯಾಯಾಧೀಶರು ಅವರಿಗೆ ಎಲ್ಲಿ ಚಿಕಿತ್ಸೆ ನೀಡುತ್ತೀರಿ ಎಂದು ವಿವರಣೆ ಕೇಳಿದ್ದಾರೆ. ಇದಕ್ಕೆ ದರ್ಶನ್ ಪರ ವಕೀಲರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಾಗಿ ಹೇಳಿದ್ದಾರೆ.

ಹೀಗಾಗಿ ಷರತ್ತಿನ ಮೇಲೆ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುವಷ್ಟು ದಿನ ಮಾತ್ರ ಜಾಮೀನು ಸಿಗುವ ಸಾಧ್ಯತೆಯಿದೆ. ಇದರಿಂದಾಗಿ ಜಾಮೀನು ಸಿಕ್ಕ ತಕ್ಷಣ ದರ್ಶನ್ ನೇರವಾಗಿ ಮೈಸೂರಿಗೆ ಹೋಗಬಹುದು. ಆದರೆ ಅವರಿಗೆ ಬೆಂಗಳೂರಿಗೆ ತೆರಳಲು ನಿರ್ಬಂಧ ಹೇರುವ ಸಾಧ್ಯತೆಯಿದೆ.

ಚಿಕಿತ್ಸೆಗಾಗಿ ಅಷ್ಟೇ ಜಾಮೀನು ಸಿಕ್ಕರೆ ಅವರ ಗುಣಮುಖರಾದ ಬಳಿಕ ಮತ್ತೆ ಕೋರ್ಟ್ ಗೆ ಶರಣಾಗಬೇಕಾಗುತ್ತದೆ. ಅದಾದ ಬಳಿಕ ಅವರು ಬೆಂಗಳೂರಿನ ಜೈಲಿಗೆ ಶಿಫ್ಟ್ ಆಗಲು ಮನವಿ ಮಾಡುವ ಸಾಧ್ಯತೆಯಿದೆ. ಅಥವಾ ಆರೋಗ್ಯದ ನೆಪದಲ್ಲಿ ಮತ್ತಷ್ಟು ದಿನ ಜಾಮೀನು ವಿಸ್ತರಿಸುವ ಸಾಧ್ಯತೆಯೂ ಇದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಿನಿಮಾ ಬದುಕಿನಲ್ಲಿ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಶ್ರೀಮುರುಳಿ

₹60ಕೋಟಿ ವಂಚನೆ ಪ್ರಕರಣ: ನಾನು ಯಾವುದೇ ತಪ್ಪು ಮಾಡಿಲ್ಲ ಎಂದ ಶಿಲ್ಪಾ ಶೆಟ್ಟಿ ಪತಿ

ಲಕ್ಷ್ಮೀ ನಿವಾಸ ಧಾರವಾಹಿಯಿಂದ ಹೊರನಡೆದ ಹಿರಿಯ ನಟಿ ಅಂಜಲಿ: ಇನ್ನೊಬ್ಬ ಹಿರಿಯ ನಟಿಯೂ ಶೀಘ್ರವೇ ಔಟ್

ಮೂರು ಲಕ್ಷ ಹಣ ಕಳುವಾಯ್ತು ಎಂದು ದೂರು ಕೊಟ್ಟ ವಿಜಯಲಕ್ಷ್ಮಿಗೆ ಶಾಕ್ ನೀಡಿದ ಪೊಲೀಸರು

ಸೀತಾರಾಮ ಧಾರವಾಹಿಗೆ ಗಗನ್ ಬದಲು ಈ ನಟ ನಾಯಕನಾಗಬೇಕಿತ್ತು: ವೈಷ್ಣವಿ ಬಿಚ್ಚಿಟ್ಟ ಸತ್ಯ

ಮುಂದಿನ ಸುದ್ದಿ
Show comments