ಜೈಲಿನಿಂದ ಹೊರಬಂದ ಮೇಲೆ ದರ್ಶನ್ ಹೀಗಿರಲ್ಲ: ಅದಕ್ಕೆ ಕಾರಣ ಮಗ ವಿನೀಶ್ ಬುದ್ಧಿವಾದ

Krishnaveni K
ಶುಕ್ರವಾರ, 19 ಜುಲೈ 2024 (09:46 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಬಿಡುಗಡೆಯಾದ ಬಳಿಕ ಹೇಗಿರಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ. ಅವರು ಬಿಡುಗಡೆಯಾದ ಮೇಲೆ ಹೀಗಂತೂ ಇರಲ್ಲ ಎನ್ನುತ್ತಿವೆ ಮೂಲಗಳು. ಇದಕ್ಕೆ ಕಾರಣ ಮಗ ವಿನೀಶ್ ಗೆ ಮಾಡಿರುವ ಪ್ರಾಮಿಸ್.

ಜೈಲಿನಲ್ಲಿರುವ ತಂದೆಯನ್ನು ನೋಡಲು ವಿನೀಶ್ ಆಗಾಗ ಜೈಲಿಗೆ ಭೇಟಿ ನೀಡುತ್ತಿರುತ್ತಾರೆ. ಅಪ್ಪನೆಂದರೆ ವಿನೀಶ್ ಗೆ ತುಂಬಾ ಇಷ್ಟ. ಆದರೆ ಈ ಸ್ಥಿತಿಯಲ್ಲಿ ತನ್ನ ತಂದೆಯನ್ನು ನೋಡಲು ಆತನಿಗೂ ಸಾಧ್ಯವಾಗುತ್ತಿಲ್ಲ. ಪವಿತ್ರಾ ಗೌಡಗೆ ಉಪಕಾರ ಮಾಡಲು ಹೋಗಿ ತಂದೆ ಜೈಲು ಸೇರಿರುವುದು ವಿನೀಶ್ ಕಂಗೆಡಿಸಿದೆ.

ಇತ್ತೀಚೆಗೆ ಜೈಲಿಗೆ ಭೇಟಿ ನೀಡಿದ್ದಾಗ ತಲೆಕೂದಲನ್ನೂ ಶೇವ್ ಮಾಡಿಕೊಂಡಿರುವ ತಂದೆಯನ್ನು ನೋಡಿ ವಿನೀಶ್ ತುಂಬಾ ಬೇಸರಪಟ್ಟುಕೊಂಡಿದ್ದಾನಂತೆ. ರಾಜನಂತೆ ಜನಗಳ ಮಧ್ಯೆ ಓಡಾಡುತ್ತಿದ್ದ ತಂದೆ ಈಗ ಜೈಲಿನಲ್ಲಿ ನಾಲ್ಕು ಗೋಡೆಯ ಮಧ್ಯೆ ಬಂಧಿಯಾಗಿರುವುದನ್ನು ಅವನಿಗೆ ನೋಡಲು ಸಾಧ್ಯವಾಗುತ್ತಿಲ್ಲ.

ಇದೇ ಕಾರಣಕ್ಕೆ ಅಪ್ಪಾ ನೀವು ಹೊರಗೆ ಬಂದ ಮೇಲೆ ಈಗ ಇರುವ ಯಾರ ಸಹಸವಾಸವೂ ಇಟ್ಟುಕೊಳ್ಳಬೇಡಿ. ಇವರು ಯಾರೂ ಸರಿಯಿಲ್ಲ ಎಂದು ತಂದೆಗೆ ಬುದ್ಧಿಮಾತು ಹೇಳಿದ್ದಾನೆ. ಮಗನ ಮಾತಿಗೆ ದರ್ಶನ್ ಕೂಡಾ ಭಾವುಕರಾಗಿ ಒಪ್ಪಿಕೊಂಡಿದ್ದಾರಂತೆ. ಹೀಗಾಗಿ ದರ್ಶನ್ ಒಂದು ವೇಳೆ ಜೈಲಿನಿಂದ ಹೊರಬಂದರೆ ಅವರು ಖಂಡಿತಾ ಬದಲಾಗುತ್ತಾರೆ ಎಂಬುದು ಎಲ್ಲರ ನಂಬಿಕೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಾಳೆ ಡೆವಿಲ್ ತೆರೆಗೆ, ಜೈಲಿನಲ್ಲಿದ್ರೂ ದರ್ಶನ್ ಕೈಬಿಡದ ಕನ್ನಡ ತಾರೆಯರು ಇವರೇ

IMDb 2025 ರ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳು ಪ್ರಕಟ

ನಿನ್ನ ವ್ಯಕ್ತಿತ್ವಕ್ಕೆ ನಾನೇ ನಿನ್ನ ದೊಡ್ಡ ಚಿಯರ್‌ಲೀಡರ್‌: ರುಕ್ಮಿಣಿ ವಸಂತ್‌ಗೆ ಚೈತ್ರಾ ಪ್ರೀತಿಯ ವಿಶ್‌

ಶಿರಡಿ ಸಾಯಿಬಾಬಾಗೆ ಕೊಡುಗೆ ನೀಡಿ, ಕಾರಣ ಬಿಚ್ಚಿಟ್ಟ ಕನಸಿನ ರಾಣಿ ಮಾಲಾಶ್ರೀ

ದರ್ಶನ್ ಜೈಲಿನಲ್ಲಿ ಹಲ್ಲೆ ಮಾಡಿದ್ದು ನಿಜಾನಾ: ಪತ್ನಿ ವಿಜಯಲಕ್ಷ್ಮಿ ಹೇಳಿದ್ದೇನು

ಮುಂದಿನ ಸುದ್ದಿ
Show comments