Select Your Language

Notifications

webdunia
webdunia
webdunia
webdunia

ರೇಣುಕಾಸ್ವಾಮಿ ಪ್ರಕರಣದ ಸಾಕ್ಷಿ ಜೊತೆ ವಾಮನ ಸಿನಿಮಾ ವೀಕ್ಷಣೆ: ದರ್ಶನ್ ಗೆ ಕಾದಿದೆ ಮತ್ತೊಂದು ಸಂಕಷ್ಟ

Darshan

Krishnaveni K

ಬೆಂಗಳೂರು , ಗುರುವಾರ, 10 ಏಪ್ರಿಲ್ 2025 (09:52 IST)
ಬೆಂಗಳೂರು: ತಮ್ಮ ಆಪ್ತ ಧನ್ವೀರ್ ಗೌಡ ನಾಯಕರಾಗಿರುವ ವಾಮನ ಸಿನಿಮಾ ವೀಕ್ಷಿಸಲು ಬಂದ ನಟ ದರ್ಶನ್ ಸಂಕಷ್ಟಕ್ಕೀಡಾಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಾಕ್ಷಿ ಜೊತೆಯೇ ಕೂತು ಸಿನಿಮಾ ವೀಕ್ಷಿಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ಚಿಕ್ಕಣ್ಣ ಕೂಡಾ ಸಾಕ್ಷಿಯಾಗಿದ್ದಾರೆ. ಆದರೆ ನಿನ್ನೆ ವಾಮನ ಸಿನಿಮಾವನ್ನು ಚಿಕ್ಕಣ್ಣ ಪಕ್ಕದಲ್ಲೇ ಕುಳಿತು ದರ್ಶನ್ ವೀಕ್ಷಣೆ ಮಾಡಿದ್ದಾರೆ. ಇದೇ ವಿಚಾರ ಈಗ ಅವರಿಗೆ ಸಂಕಷ್ಟ ತಂದೊಡ್ಡಲಿದೆ.

ದರ್ಶನ್ ಗೆ ಜಾಮೀನು ನೀಡುವಾಗ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿತ್ತು. ಇದರಲ್ಲಿ ಅವರು ಯಾವುದೇ ಕಾರಣಕ್ಕೂ ಸಾಕ್ಷಿಗಳನ್ನು ಭೇಟಿ ಮಾಡುವುದು, ಪ್ರಭಾವ ಬೀರುವುದು ಮಾಡಬಾರದು. ಆದರೆ ನಿನ್ನೆ ಚಿಕ್ಕಣ್ಣ ಜೊತೆಯೇ ಕುಳಿತು ಸಿನಿಮಾ ವೀಕ್ಷಣೆ ಮಾಡಿದ್ದಾರೆ.

ಇದನ್ನೇ ಪೊಲೀಸರು ಅವರ ಜಾಮೀನು ರದ್ದುಮಾಡುವಂತೆ ನ್ಯಾಯಾಲಯದಲ್ಲಿ ವಾದ ಮಾಢಬಹುದು. ಈ ಹಿಂದೆ ಸಾಕ್ಷಿಯಾಗಿದ್ದ ಚಿಕ್ಕಣ್ಣ ಪರಪ್ಪನ ಅಗ್ರಹಾರಕ್ಕೆ ಬಂದು ದರ್ಶನ್ ರನ್ನು ಭೇಟಿ ಮಾಡಿದ್ದಾಗಲೂ ಪೊಲೀಸರು ವಿಚಾರಣೆ ನಡೆಸಿದ್ದರು. ಈಗ ಮತ್ತೆ ಚಿಕ್ಕಣ್ಣ ಮತ್ತು ದರ್ಶನ್ ಗೆ ಪೊಲೀಸರು ಬುಲಾವ್ ನೀಡುವ ಸಾಧ್ಯತೆಯಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Darshan: ಕೋರ್ಟ್ ಗೆ ಹಾಜರಾಗಲು ಬೆನ್ನು ನೋವು, ವಾಮನ ಸಿನಿಮಾ ನೋಡಲು ಥಿಯೇಟರ್ ಗೆ ಹಾಜರಾದ ದರ್ಶನ್