ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮೊನ್ನೆ ಕೋರ್ಟ್ ಗೆ ಹಾಜರಾಗಬೇಕಿದ್ದ ನಟ ದರ್ಶನ್ ಬೆನ್ನು ನೋವಿನ ನೆಪ ಹೇಳಿ ತಪ್ಪಿಸಿಕೊಂಡಿದ್ದರು. ಆದರೆ ನಿನ್ನೆ ತಮ್ಮ ಆಪ್ತ ಧನ್ವೀರ್ ಗೌಡ ಅಭಿನಯದ ವಾಮನ ಸಿನಿಮಾವನ್ನು ವೀಕ್ಷಿಸಲು ಥಿಯೇಟರ್ ಗೆ ಬಂದಿದ್ದಾರೆ. ಇದಕ್ಕೆ ಜನರ ಪ್ರತಿಕ್ರಿಯೆ ಹೇಗಿತ್ತು ನೋಡಿ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ನಟ ದರ್ಶನ್ ಮತ್ತು ಎಲ್ಲಾ ಆರೋಪಿಗಳಿಗೆ ತಿಂಗಳಿಗೊಮ್ಮೆ ಕಡ್ಡಾಯವಾಗಿ ಕೋರ್ಟ್ ಗೆ ಹಾಜರಾಗಲು ಷರತ್ತು ವಿಧಿಸಲಾಗಿತ್ತು. ಕಳೆದ ತಿಂಗಳು ಕೋರ್ಟ್ ಗೆ ಬಂದಿದ್ದ ದರ್ಶನ್ ಈ ಬಾರಿ ಬೆನ್ನು ನೋವಿನ ನೆಪ ಹೇಳಿ ತಪ್ಪಿಸಿಕೊಂಡಿದ್ದರು.
ಕೋರ್ಟ್ ಕೂಡಾ ವಿಚಾರಣೆಗೆ ತಪ್ಪಿಸಿಕೊಳ್ಳುವಂತಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿತ್ತು. ಆದರೆ ಮೊನ್ನೆ ಬೆನ್ನು ನೋವಿನ ನೆಪ ಹೇಳಿ ತಪ್ಪಿಸಿಕೊಂಡಿದ್ದ ದರ್ಶನ್ ನಿನ್ನೆ ವಾಮನ ಸಿನಿಮಾವನ್ನು ವೀಕ್ಷಿಸಲು ಥಿಯೇಟರ್ ಗೆ ಬಂದಿದ್ದಾರೆ.
ಇದಕ್ಕೆ ಜನ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಇದೇ ವ್ಯಕ್ತಿಗೆ ಅಲ್ವಾ ಮೊನ್ನೆ ಬೆನ್ನು ನೋವಿದ್ದಿದ್ದು. ವಿಚಾರಣೆಗೆ ಬೆನ್ನು ನೋವು, ಸಿನಿಮಾ ನೋಡಲು ಯಾವುದೇ ಸಮಸ್ಯೆಯಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗಿದ್ದರೆ ಬೆನ್ನು ನೋವು ಕೇವಲ ವಿಚಾರಣೆ ವಿಚಾರ ಬಂದರೆ ಮಾತ್ರ ಬಂದು ಹೋಗುತ್ತಾ ಎಂದು ಟಾಂಗ್ ಕೊಟ್ಟಿದ್ದಾರೆ.