ದರ್ಶನ್‌ ಅವರು ಆಚೆ ಬಂದ್ಮೇಲೆ ದುಪ್ಪಟ್ಟು ಮೆರೆಸಬೇಕು: ಹುಲಿ ಕಾರ್ತಿಕ್

Sampriya
ಶುಕ್ರವಾರ, 20 ಸೆಪ್ಟಂಬರ್ 2024 (18:19 IST)
Photo Courtesy X
ಸದ್ಯ ದರ್ಶನ್ ಅವರ ಸಮಯ ಒಳ್ಳೇದಿಲ್ಲ, ಅವರು ಈ ಎಲ್ಲ ಸಂಕಷ್ಟಗಳನ್ನು ಗೆದ್ದು ಹೊರಬಂದು ಮತ್ತೇ ತೆರೆ ಮೇಲೆ ಮಿಂಚುತ್ತಾರೆ ಎಂದು ಗಿಚ್ಚಿಗಿಲಿ ವಿನ್ನರ್ ಹುಲಿ ಕಾರ್ತಿಕ್ ಹೇಳಿದರು.

'ಗಿಚ್ಚಿ ಗಿಲಿಗಿಲಿ' ಕಾರ್ಯಕ್ರಮದ ಗೆಲುವಿನ ಬಗ್ಗೆ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರತಿಕ್ರಿಯಿಸಿದರು.

ಸದ್ಯ ಬಿಂದಿಗೆಯಲ್ಲಿ ತಳದಲ್ಲಿರುವ ನೀರಿನಂತೆ ಇರುವ ದರ್ಶನ್‌ ಅವರಿಗೆ ಕಾಗೆ ಹಾಕುವ ಒಂದೊಂದೆ ಕಲ್ಲಿನಂತ್ತೆ ಒಬ್ಬೊಬ್ಬರೆ ಪೆಟ್ಟು ಕೊಡುತ್ತಿದ್ದಾರೆ. ಆದರೆ ನೀರು ಮೇಲೆ ಬಂದ ಹಾಗೇ ದರ್ಶನ್ ಅವರು ಕೂಡಾ ಇದರಿಂದ ಹೊರಬಂದು ಮಿಂಚುತ್ತಾರೆ ಎಂದು ಹೇಳಿದರು.

ದರ್ಶನ್ ಅವರಿಗೆ ಏನು ಆಗಬಾರದು.  ಅವರ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. 'ಮೆಜೆಸ್ಟಿಕ್'ನಿಂದ ಹಿಡಿದು 'ರಾಬರ್ಟ್‌'ವರೆಗೂ ಹೇಗೆ ಕುಣಿಸಿದರೋ ಹಾಗೇ ಅವರು ಬಂದ್ಮೇಲೆ ದುಪ್ಪಟ್ಟು ಅವರನ್ನು ಮೆರೆಸಬೇಕು. ನಾನೊಬ್ಬ ದರ್ಶನ್ ಅಭಿಮಾನಿಯಾಗಿ ಆಸೆ ಎಂದು ಮಾತನಾಡಿದ್ದಾರೆ.

ಸರ್ ತುಂಬಾನೇ ಡೌನ್‌ ಟು ಅರ್ಥ್‌. ನನ್ನನ್ನು ಟಗರು ಪಲ್ಯ ಸಿನಿಮಾ ಟ್ರೇಲರ್ ಲಾಂಚ್ ವೇಳೆ ಗುರುತಿಸಿ,  ಹುಲಿ ಕಾರ್ತಿಕ್ ಅಲ್ವಾ, ನಾನು ನಿಮ್ಮ ನಟನೆ ಶೋನಲ್ಲಿ ನೋಡಿದ್ದೀನಿ ಒಳ್ಳೆಯದಾಗಲಿ ಎಂದು ಹಾರೈಸಿದ್ದರು. ನಟನೆ ಚೆನ್ನಾಗಿದೆ ಎಂದು ಹೇಳುವ ದೊಡ್ಡ ಗುಣ ಅವರಿಗೆ ಎಂದು ಕಾರ್ತಿಕ್ ಸ್ಮರಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಕ್ಷಿತಾಳ ಭಾಷೆ ಬಗ್ಗೆ ಮಾತನಾಡುವ ಯಾವ ಹಕ್ಕು ನಿಮಗಿಲ್ಲ

ಧರ್ಮೇಂದ್ರ ಸಾವಿನ ವದಂತಿ ಬೆನ್ನಲ್ಲೇ ಮಗಳಿಂದ ಸ್ಪಷ್ಟನೆ

ಇದೊಂದು ಭಯಾನಕ ಘಟನೆ: ದೆಹಲಿ ಸ್ಫೋಟಕ್ಕೆ ಅಲ್ಲು ಅರ್ಜುನ್ ಸಂತಾಪ

ದರ್ಶನ್ ಜೈಲಿನಲ್ಲಿ, ಬರ್ತಡೇ ದಿನ ವಿಜಯಲಕ್ಷ್ಮಿ ಏನ್‌ ಮಾಡಿದ್ರೂ ಗೊತ್ತಾ

BBK12: ಕಿಚ್ಚ ಸುದೀಪ್ ಬಗ್ಗೆಯೇ ಗಂಭೀರ ಆರೋಪ ಮಾಡಿದ ಧ್ರುವಂತ್

ಮುಂದಿನ ಸುದ್ದಿ
Show comments