Select Your Language

Notifications

webdunia
webdunia
webdunia
webdunia

ಬೆನ್ನು ನೋವಿದ್ದರೂ ವೈದ್ಯರ ಮುಂದೆ ಪಟ್ಟು ಬಿಡುತ್ತಿಲ್ಲ ದರ್ಶನ್

Darshan
ಬೆಂಗಳೂರು: ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಎಷ್ಟೇ ನೋವಿದ್ದರೂ ವೈದ್ಯರ ಮುಂದೆ ಈ ಒಂದು ವಿಚಾರಕ್ಕೆ ಬಿಲ್ ಕುಲ್ ರಾಜಿಯಾಗಲು ಒಪ್ಪುತ್ತಿಲ್ಲ ಎಂದು ತಿಳಿದುಬಂದಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ದರ್ಶನ್ ಇತ್ತೀಚೆಗಷ್ಟೇ ಮಧ್ಯಂತರ ಜಾಮೀನು ಪಡೆದು ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಬೆನ್ನುನೋವಿಗೆ ಚಿಕಿತ್ಸೆ ಪಡೆದುಕೊಳ್ಳುವ ಸಲುವಾಗಿಯೇ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿತ್ತು. ಇದೀಗ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ನಾಲ್ಕು ದಿನ ಕಳೆದಿದೆ.

ನಟ ದರ್ಶನ್ ಗೆ ಬೆನ್ನು ನೋವಿನ ತೀವ್ರತೆಯಿಂದಾಗಿ ಕಾಲೂ ನೋವು ಉಂಟಾಗಿದ್ದು ಇದರಿಂದ ನಡೆದಾಡಲೂ ಕಷ್ಟಪಡುತ್ತಿದ್ದಾರೆ.  ಮೊನ್ನೆಯಷ್ಟೇ ನಟ ಧನ್ವೀರ್ ಸಹಾಯದೊಂದಿಗೆ ನಡೆದಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಅವರಿಗೆ ವೈದ್ಯರು ಶಸ್ತ್ರಚಿಕಿತ್ಸೆಗೊಳಗಾಗಲು ಸೂಚಿಸಿದ್ದರು.

ಹಾಗಿದ್ದರೂ ಶಸ್ತ್ರಚಿಕಿತ್ಸೆಗೊಳಗಾಗಲು ದರ್ಶನ್ ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ಏನೇ ಇದ್ದರೂ ಫಿಸಿಯೋಥೆರಪಿ ಮತ್ತು ಗುಳಿಗೆಗಳ ಮೂಲಕವೇ ಗುಣಪಡಿಸಿ. ಯಾವುದೇ ಕಾರಣಕ್ಕೂ ಶಸ್ತ್ರಚಿಕಿತ್ಸೆ ಬೇಡ ಎಂದು ವೈದ್ಯರ ಮುಂದೆ ಪಟ್ಟು ಹಿಡಿದಿದ್ದಾರಂತೆ. ಸದ್ಯದಲ್ಲೇ ಅವರು ವೈದ್ಯಕೀಯ ವರದಿಗಳನ್ನು ಕೋರ್ಟ್ ಗೆ ಸಲ್ಲಿಸಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಹುನಿರೀಕ್ಷಿತ ಭೈರತಿ ರಣಗಲ್ ಸಿನಿಮಾದ ಟ್ರೈಲರ್ ರಿಲೀಸ್‌, ಶಿವಣ್ಣ ಲುಕ್‌ಗೆ ಅಭಿಮಾನಿಗಳು ಫಿದಾ