Webdunia - Bharat's app for daily news and videos

Install App

ಹುಟ್ಟುಹಬ್ಬ ಡಿ ಬಾಸ್ ದರ್ಶನ್ ಕಡೆಯಿಂದ ವಿಶೇಷ ಸುದ್ದಿ

Krishnaveni K
ಭಾನುವಾರ, 4 ಫೆಬ್ರವರಿ 2024 (12:07 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟಹಬ್ಬಕ್ಕೆ ಇನ್ನು ಕೆಲವೇ ದಿನ ಬಾಕಿಯಿದ್ದು, ಈ ಬಾರಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ವಿಶೇಷ ಉಡುಗೊರೆ ಸಿಗಲಿದೆ.

ದರ್ಶನ್ ಹುಟ್ಟುಹಬ್ಬಕ್ಕೆ ಈ ಬಾರಿ ಅಭಿಮಾನಿಗಳಿಗೆ ಅವರ ಹೊಸ ಸಿನಿಮಾ ಬಗ್ಗೆ ಅಪ್ ಡೇಟ್ ಸಿಗಲಿದೆ. ದರ್ಶನ್ ಮುಂಬರುವ ಸಿನಿಮಾವನ್ನು ಪ್ರಕಾಶ್ ವೀರ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾಗೆ ಡೆವಿಲ್-ದಿ ಹೀರೋ ಎಂದು ಟೈಟಲ್ ಇಡಲಾಗಿದೆ. ಇದೇ ಮೊದಲ ಬಾರಿಗೆ ದರ್ಶನ್ ಸಿನಿಮಾಗೆ ಕ್ಯಾಮರಾ ಮೆನ್ ಸಂತೋಷ್ ರೈ ಪಾತಾಜೆ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್ ಕೆಲಸ ಮಾಡಲಿದ್ದಾರೆ.

ಡೆವಿಲ್- ದಿ ಹೀರೋ ಫಸ್ಟ್ ಲುಕ್
ದರ್ಶನ್ ನಾಯಕರಾಗಿರುವ ಡೆವಿಲ್ ದಿ ಹೀರೋ ಸಿನಿಮಾದ ಫಸ್ಟ್ ಲುಕ್ ದರ್ಶನ್ ಹುಟ್ಟುಹಬ್ಬದ ದಿನವಾದ ಫೆಬ್ರವರಿ 16 ರಂದು ಬಿಡುಗಡೆಯಾಗಲಿದೆ. ಇದೂ ಕೂಡಾ ಮಾಸ್ ಎಂಟರ್ ಟೈನರ್ ಸಿನಿಮಾವಾಗಿರಲಿದೆ ಎಂದು ನಿರ್ದೇಶಕರು ಈಗಾಗಲೇ ಹೇಳಿದ್ದಾರೆ. ಇತ್ತೀಚೆಗಷ್ಟೇ ಕಾಟೇರದಂತಹ ಹಿಟ್‍ ಸಿನಿಮಾ ಕೊಟ್ಟ ದರ್ಶನ್ ಈಗ ಮತ್ತೊಂದು ಮಾಸ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಈಗಾಗಲೇ ಸಿನಿಮಾದ ಮುಹೂರ್ತ ಕಾರ್ಯಕ್ರಮ ನೆರವೇರಿತ್ತು.

ಹುಟ್ಟುಹಬ್ಬದ ದಿನ ಕೆಲಸ ಮಾಡುವ ದರ್ಶನ್
ಸಾಮಾನ್ಯವಾಗಿ ಹೀರೋಗಳು ಹುಟ್ಟುಹಬ್ಬದ ದಿನ ಅಭಿಮಾನಿಗಳೊಂದಿಗೆ ಕಾಲ ಕಳೆಯುವುದು ಅಥವಾ ಸ್ನೇಹಿತರ ಜೊತೆ ಪಾರ್ಟಿ ಮಾಡ ಸಂಭ್ರಮಿಸುತ್ತಾರೆ. ಆದರೆ ದರ್ಶನ್ ಪ್ರತೀ ಬಾರಿಯೂ ತಮ್ಮ ಹುಟ್ಟುಹಬ್ಬದ ದಿನ ಕೊಂಚ ಡಬ್ಬಿಂಗ್ ಕೆಲಸವಾದರೂ ಮಾಡಿಯೇ ಮಾಡುತ್ತಾರೆ. ಹುಟ್ಟುಹಬ್ಬದ ದಿನ ಕೆಲಸ ಮಾಡುವುದು ಅವರು ಹಿಂದಿನಿಂದಲೂ ರೂಢಿಸಿಕೊಂಡು ಬಂದಿರುವ ಪದ್ಧತಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Drug Case:ನಟಿ ನೀಡಿದ ದೂರಿನಂತೆ ಮಲಯಾಳಂ ನಟ ಶೈನ್ ಟಾಮ್ ಚಾಕೊ ಅರೆಸ್ಟ್‌

Anurag Kashyap: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ ಏನಿವಾಗ ಎಂದ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು

ಸಲ್ಮಾನ್‌ ಖಾನ್‌ ಮತ್ತಷ್ಟು ಗಟ್ಟಿಯಾಗಿ ವಾಪಾಸ್ಸಾಗುತ್ತಾರೆ: ಇಮ್ರಾನ್ ಹಸ್ಮಿ ಹೀಗಂದಿದ್ಯಾಕೆ

ಕ್ರೈಸ್ತರ ಭಾವನೆಗೆ ಅಗೌರವ: ನಟ ಸನ್ನಿ ಡಿಯೋಲ್, ರಣದೀಪ್ ವಿರುದ್ಧ ಪ್ರಕರಣ ದಾಖಲು

ವಿಶೇಷ ಬೇಡಿಕೆಯನ್ನು ಮುಂದಿಟ್ಟ ಬಳುಕುವ ಬಳ್ಳಿ ಊರ್ವಸಿ, ಟ್ರೋಲ್ ಆದ ನಟಿ

ಮುಂದಿನ ಸುದ್ದಿ
Show comments