Webdunia - Bharat's app for daily news and videos

Install App

ನಟ ಅನಿರುದ್ಧ್ ಜತ್ಕಾರ್ ಹೊಸ ಪ್ರಾಜೆಕ್ಟ್ ಇಂದು ಘೋಷಣೆ

Krishnaveni K
ಭಾನುವಾರ, 4 ಫೆಬ್ರವರಿ 2024 (10:52 IST)
Photo Courtesy: facebook
ಬೆಂಗಳೂರು: ನಟ ಅನಿರುದ್ಧ್ ಜತ್ಕಾರ್ ನಾಯಕರಾಗಿರುವ ಹೊಸ ಪ್ರಾಜೆಕ್ಟ್ ಒಂದು ಇಂದು ಘೋಷಣೆಯಾಗುತ್ತಿದೆ. ಇದರ ತುಣುಕು ಈಗಾಗಲೇ ಹೊರಬಿಡಲಾಗಿದೆ.

ಎಲ್ಲರಿಗೂ ಗೊತ್ತಿರುವ ಹಾಗೆ ಜೊತೆ ಜೊತೆಯಲಿ ಧಾರವಾಹಿಯಿಂದ ಹೊರಬಂದ ಬಳಿಕ ಅನಿರುದ್ಧ್ ಉದಯ ವಾಹಿನಿಯಲ್ಲಿ ಸೂರ್ಯವಂಶ ಎಂಬ ಸೀರಿಯಲ್ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದರ ಫೋಟೋ ಶೂಟ್, ಕೆಲವು ಸಂಚಿಕೆಯ ಶೂಟಿಂಗ್ ಕೂಡಾ ನಡೆದಿತ್ತು. ಆದರೆ ವಾಹಿನಿ ಮತ್ತು ನಿರ್ದೇಶಕ ಎಸ್. ನಾರಾಯಣ್ ನಡುವೆ ಹೊಂದಾಣಿಕೆ ಕೊರತೆಯಿಂದ ಪ್ರಾಜೆಕ್ಟ್ ಅರ್ಧಕ್ಕೇ ನಿಂತು ಹೋಯಿತು. ಇದೀಗ ಮತ್ತೆ ಸೂರ್ಯವಂಶದೊಂದಿಗೆ ಅನಿರುದ್ಧ್ ಬರಲಿದ್ದಾರೆ.

ಸಾಹಸ ಸಿಂಹ ಡಾ. ವಿಷ್ಣು ವರ್ಧನ್ ಫೇಮಸ್ ಸಿನಿಮಾ ಸೂರ್ಯವಂಶ
ಈ ಹಿಂದೆ ಎಸ್. ನಾರಾಯಣ್ ನಿರ್ದೇಶಿಸಿದ್ದ ಸೂರ್ಯವಂಶ ಸಿನಿಮಾದಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ನಾಯಕರಾಗಿ ನಟಿಸಿದ್ದರು. ಈ ಸಿನಿಮಾ ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿನಿಮಾಗಳಲ್ಲಿ ಒಂದು. ಈಗ ಅದೇ ಟೈಟಲ್ ಇಟ್ಟುಕೊಂಡು ವಿಷ್ಣು ಅಳಿಯ ಅನಿರುದ್ಧ್ ಜತ್ಕಾರ್ ಧಾರವಾಹಿ ಮಾಡುತ್ತಿದ್ದಾರೆ. ಈ ಧಾರವಾಹಿಯ ತುಣುಕೊಂದನ್ನು ಹೊರಬಿಡಲಾಗಿದ್ದು, ಉಳಿದ ವಿವರಗಳನ್ನು ಇಂದು ಸಂಜೆ 6 ಗಂಟೆಗೆ ಪ್ರಕಟಿಸುವುದಾಗಿ ಉದಯ ವಾಹಿನಿ ಪ್ರಕಟಣೆ ನೀಡಿದೆ.

ಜೊತೆ ಜೊತೆಯಲಿ ಧಾರವಾಹಿ ಬಳಿಕ ಅನಿರುದ್ಧ್ ಅಭಿಮಾನಿ ಬಳಗ ದೊಡ್ಡದಾಗಿತ್ತು. ಅದರಲ್ಲೂ ಅವರನ್ನು ಆರಾಧಿಸುವ ಕಿರುತೆರೆ ಅಭಿಮಾನಿ ಬಳಗವೇ ಇದೆ. ಇದೀಗ ಅನಿರುದ್ಧ್ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ಸೂರ್ಯವಂಶ ಧಾರವಾಹಿ ಅರ್ಧಕ್ಕೇ ನಿಂತಾಗ ಅನಿರುದ್ಧ್ ಸಿನಿಮಾವೊಂದನ್ನು ಮಾಡಿದ್ದರು. ಚೆಫ್ ಚಿದಂಬರ ಎನ್ನುವ ಡಾರ್ಕ್ ಕಾಮಿಡಿ ಥ್ರಿಲ್ಲರ್ ಸಿನಿಮಾ ಚಿತ್ರೀಕರಣ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಸಿನಿಮಾ ಈ ವರ್ಷ ತೆರೆ ಕಾಣಲಿದೆ. ಅದರ ನಡುವೆ ಅವರು ಮತ್ತೆ ಧಾರವಾಹಿಗೆ ಕಮ್ ಬ್ಯಾಕ್ ಮಾಡುವ ಮೂಲಕ ಬ್ಯುಸಿಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments