Webdunia - Bharat's app for daily news and videos

Install App

ನಾನ್ ವೆಜ್ ತಿನ್ನಲ್ಲ ಅಂದ್ರೂ ರೇಣುಕಾಸ್ವಾಮಿ ಬಾಯಿಗೆ ಬಿರಿಯಾನಿ ತುರುಕಿದ್ದ ದರ್ಶನ್

Krishnaveni K
ಶುಕ್ರವಾರ, 14 ಜೂನ್ 2024 (13:26 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಗ್ಯಾಂಗ್ ನ ಒಂದೊಂದೇ ಭೀಕರ ಕೃತ್ಯಗಳು ಬೆಳಕಿಗೆ ಬರುತ್ತಿವೆ. ಹಲ್ಲೆ ವೇಳೆ ದರ್ಶನ್ ಮತ್ತು ಇತರರು ರೇಣುಕಾಸ್ವಾಮಿ ಮೇಲೆ ಇನ್ನಿಲ್ಲದ ವಿಕೃತಿ ಮೆರೆದಿದ್ದಾರೆ ಎಂಬುದು ತಿಳಿದುಬಂದಿದೆ.

ರೇಣುಕಾಸ್ವಾಮಿಯನ್ನು ಶೆಡ್ ಗೆ ಕರೆದುಕೊಂಡು ಬಂದ ಮೇಲೆ ದರ್ಶನ್ ಚಿಕನ್ ಬಿರಿಯಾನಿ ತಿನಿಸಲು ಯತ್ನಿಸಿದ್ದರು. ಈ ವೇಳೆ ರೇಣುಕಾಸ್ವಾಮಿ ನಾನು ನಾನ್ ವೆಜ್ ತಿನ್ನಲ್ಲ, ಸಸ್ಯಾಹಾರಿ ಎಂದರೂ ದರ್ಶನ್ ಬಿಡದೇ ಚಿಕನ್ ಬಿರಿಯಾನಿ ತಿನಿಸಿದ್ದರು. ಜಾತಿ ಕೆಡಿಸಬೇಡಿ ಎಂದರೂ ಕೇಳದೇ ಚಿಕನ್ ಪೀಸ್ ಬಾಯಿಗಿಟ್ಟರು ಎನ್ನಲಾಗಿದೆ.

ಚಿಕನ್ ಬಿರಿಯಾನಿ ಬಲವಂತವಾಗಿ ಬಾಯಿಗೆ ತುರುಕಿದ ಬಳಿಕ ಎದೆಗೆ ಜಾಡಿಸಿ ಒದ್ದಿದ್ದಾರೆ. ಅಲ್ಲದೆ, ದೊಣ್ಣೆಯಿಂದ ಹೊಡೆದು ಎಚ್ಚರಿಕೆ ಕೊಟ್ಟು ಅಲ್ಲಿಂದ ತೆರಳಿದ್ದಾರೆ. ಒಂದು ಗಂಟೆ ಬಳಿಕ ಆಪ್ತರು ದರ್ಶನ್ ಗೆ ಕರೆ ಮಾಡಿದ್ದು ಆತ ಸಾವನ್ನಪ್ಪಿದ್ದಾನೆ ಎಂಬ ವಿಚಾರ ತಿಳಿಸಿದ್ದಾರೆ.

ಈ ವೇಳೆ ಗಾಬರಿಯಾದ ದರ್ಶನ್ ಮತ್ತೆ ಶೆಡ್ ಗೆ ಬಂದಿದ್ದಾರೆ. ಈ ಕ್ಷಣದ ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿತ್ತು. ಪೊಲೀಸ್ ವಿಚಾರಣೆ ವೇಳೆ ದರ್ಶನ್ ತಾನು ದೊಣ್ಣೆಯಿಂದ ಹೊಡೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಸ್ಥಳ ಮಹಜರು ವೇಳೆ ಪೊಲೀಸರು ಈ ದೊಣ್ಣೆಯನ್ನು ವಶಪಡಿಸಿಕೊಂಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿವೋರ್ಸ್ ವದಂತಿ ಬೆನ್ನಲ್ಲೇ ಗಣೇಶ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ನಟ ಗೋವಿಂದ ದಂಪತಿ

ಹುಂಡೈ ವಾಹನದಲ್ಲಿ ಪದೇ ಪದೇ ಸಮಸ್ಯೆ, ನಟ ಶಾರುಖ್‌, ದೀಪಿಕಾ ವಿರುದ್ಧ ಬಿತ್ತು ಕೇಸ್‌, ಯಾಕೆ ಗೊತ್ತಾ

ಗಣೇಶ ಹಬ್ಬಕ್ಕೆ ಈ ಬಾರಿಯೂ ಜೈಲಿನಲ್ಲೇ ದಾಸ : ಪತ್ನಿ ವಿಜಯಲಕ್ಷ್ಮಿ ಏನ್ ಮಾಡಿದ್ರೂ ಗೊತ್ತಾ

ಬರ್ತ್ ಡೇಗೆ ಮನೆ ಬಳಿ ಬರಬೇಡಿ ಎಂದಿಲ್ಲ ಕಿಚ್ಚ ಸುದೀಪ್: ಫ್ಯಾನ್ಸ್ ಗೆ ದೊಡ್ಡ ಸರ್ಪ್ರೈಸ್

ಮಡೆನೂರು ಮನು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೆ ಶಿವಣ್ಣ ಏನು ಮಾಡಿದ್ರು ವಿಡಿಯೋ ನೋಡಿ

ಮುಂದಿನ ಸುದ್ದಿ
Show comments