Webdunia - Bharat's app for daily news and videos

Install App

ದರ್ಶನ್ ಇರುವ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿದ್ದಕ್ಕೆ ಕಾರಣ ಬಯಲು

Krishnaveni K
ಶುಕ್ರವಾರ, 14 ಜೂನ್ 2024 (12:10 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್ ಇರುವ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿರುವುದಕ್ಕೆ ಕಾರಣವೇನೆಂದು ಬಯಲಾಗಿದೆ.

ದರ್ಶನ್ ಇರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿ ಒಳಗಡೆ ಏನಾಗುತ್ತಿದೆ ಎಂದು ಹೊರಗಡೆ ಗೊತ್ತಾಗದಂತೆ ಮುಚ್ಚಿದ್ದು ಎಲ್ಲರ ಟೀಕೆಗೆ ಗುರಿಯಾಗಿದೆ. ಆದರೆ ಪೊಲೀಸರು ಇದರ ಹಿಂದಿರುವ ಕಾರಣವೇನೆಂದು ವಿವರಣೆ ನೀಡಿಲ್ಲ.

ಆದರೆ ಈಗ ಇಂತಹದ್ದೊಂದು ಕ್ರಮ ಕೈಗೊಳ್ಳಲು ದರ್ಶನ್ ಮನವಿಯೇ ಕಾರಣ ಎನ್ನಲಾಗುತ್ತಿದೆ. ಠಾಣೆಗೆ ಸೈಡ್ ವಾಲ್ ಗಳಿಗೆ ಮೇಲಿನ ಅಂತಸ್ತುಗಳಿಗೆ ಶಾಮಿಯಾನ ಹಾಕಿ ಮುಚ್ಚಿದ್ದು ದರ್ಶನ್ ಗಾಗಿಯೇ ಎಂದು ತಿಳಿದುಬಂದಿದೆ. ದರ್ಶನ್ ಆಂಡ್ ಗ್ಯಾಂಗ್ ಗೆ ವಿಐಪಿ ಟ್ರೀಟ್ ಮೆಂಟ್ ನೀಡಲಾಗುತ್ತಿದೆ ಎಂಬ ಆರೋಪಗಳೂ ಇದರ ಹಿಂದೆಯೇ ಕೇಳಿಬಂದಿದೆ.

ಕಳೆದ ಮೂರು ದಿನಗಳಿಂದ ದರ್ಶನ್ ಪೊಲೀಸ್ ಠಾಣೆಯಲ್ಲೇ ಕಳೆದಿದ್ದಾರೆ. ಈ  ವೇಳೆ ಪೊಲೀಸರಿಗೆ ‘ನನಗೆ ಒಂದೇ ಕಡೆ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಸ್ವಲ್ಪ ಬಾಡಿ ರಿಲ್ಯಾಕ್ಸ್ ಆಗಬೇಕು. ಅದಕ್ಕೆ ಆಚೀಚೆ ಓಡಾಡಬೇಕು. ಕೈ ನಡುಗುತ್ತದೆ, ಸಿಗರೇಟು ಕೊಡಿ’ ಎಂದು ಬೇಡಿಕೆಯಿಟ್ಟಿದ್ದಾರೆ.  ಹೀಗಾಗಿಯೇ ದರ್ಶನ್ ಗೆ ಓಡಾಡಲು ಸೈಡ್ ವಾಲ್ ಹಾಕಿಸಿಕೊಡಲು ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಒಂದು ಪೊಲೀಸ್ ಠಾಣೆಗೆ ಎಷ್ಟೋ ಮಂದಿ ಅಪರಾಧ ಪ್ರಕರಣದಲ್ಲಿ ಬಂದು ಹೋಗುತ್ತಾರೆ. ಆಧರೆ ಯಾರಿಗೂ ಇಲ್ಲದ ಟ್ರೀಟ್ ಮೆಂಟ್ ದರ್ಶನ್ ಗೆ ಯಾಕೆ ಎಂಬ ಆಕ್ರೋಶ ಕೇಳಿಬಂದಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

46ವರ್ಷಗಳ ಬಳಿಕ ಸ್ಕ್ರಿನ್ ಹಂಚಿಕೊಳ್ಳಲಿದ್ದಾರೆ ದಕ್ಷಿಣ ಭಾರತದ ಸ್ಟಾರ್ ನಟರು

ದರ್ಶನ್ ಭೇಟಿಯಾದ ಬೆನ್ನಲ್ಲೇ ಡೆವಿಲ್‌ ಸಿನಿಮಾದ ಬಿಗ್‌ಅಪ್ಡೇಟ್‌ ಕೊಟ್ಟ ವಿಜಯಲಕ್ಷ್ಮಿ

ವ್ಯಕ್ತಿಯೊಬ್ಬರಿಗೆ ರಶ್ಮಿಕಾ ಶೇಕ್‌ಹ್ಯಾಂಡ್ ಕೊಟ್ರೆ ವಿಜಯ್ ದೇವರಕೊಂಡ ಹೀಗೇ ನಡೆದುಕೊಳ್ಳುವುದಾ, Viral Video

ವಿಷ್ಣು ಸ್ಮಾರಕಕ್ಕೆ ಕಿಚ್ಚ ಜಾಗ ಕೊಟ್ರೇ, ಅಭಿಮಾನಿಗಳ ಸಂಘಟನೆ ಹೈಕೋರ್ಟ್ ಗೆ ಹೋಗೋದಾ

ರಮ್ಯಾಗೆ ಅಶ್ಲೀಲ ಮೆಸೇಜ್‌, ಜೀವಬೆದರಿಕೆ ಪ್ರಕರಣ: ತನಿಖೆಯಲ್ಲಿ ಭಾರೀ ಬೆಳವಣಿಗೆ

ಮುಂದಿನ ಸುದ್ದಿ
Show comments