ಬೆಂಗಳೂರು: ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ವಿಚಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇದೀಗ ಇದೇ ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ತಮ್ಮ ಕಟ್ಟಾ ಅಭಿಮಾನಿಯೊಬ್ಬರ ತಂದೆ ಮೆದುಳು ಜ್ವರದಿಂದ ಬಳಲುತ್ತಿದ್ದು ಅವರ ಚಿಕಿತ್ಸೆಗೆ ಹಣ ಬೇಕಾಗಿದೆ ಎಂದು ತಿಳಿದ ತಕ್ಷಣ ದರ್ಶನ್ ನೆರವು ನೀಡಿದ್ದು ಈಗ ಸುದ್ದಿಯಾಗಿದೆ. ಅಭಿಮಾನಿಗಳ ಬಳಗದಿಂದ ದರ್ಶನ್ ಗೆ ಈ ವಿಚಾರ ತಿಳಿದುಬಂದಿತ್ತು. ಕೇವಲ ಒಂದೇ ಗಂಟೆಯಲ್ಲಿ ಕಷ್ಟದಲ್ಲಿರುವ ಅಭಿಮಾನಿಯ ನೆರವಿಗೆ ದರ್ಶನ್ ಧಾವಿಸಿದ್ದಾರೆ.
ಇದೀಗ ಆ ಅಭಿಮಾನಿಯ ತಂದೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನಷ್ಟು ಹಣದ ಅವಶ್ಯಕತೆಯಿದೆ. ಇದಕ್ಕಾಗಿ ಅಭಿಮಾನಿಗಳ ನೆರವಿಗಾಗಿ ಎದುರು ನೋಡುತ್ತಿದ್ದಾರೆ.