ಎಲ್ಲಾ ಇದ್ರೂ ದರ್ಶನ್ ಗೆ ಕಷ್ಟ ಕಾಲದಲ್ಲಿ ನೆರವಾದ ಚಿತ್ರರಂಗದ ಸ್ನೇಹಿತ ಎಂದರೆ ಇವರೊಬ್ಬರೇ

Krishnaveni K
ಶನಿವಾರ, 2 ನವೆಂಬರ್ 2024 (08:44 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನಟ ದರ್ಶನ್ ಬಂಧಿತರಾದಾಗ ಅವರ ಆತ್ಮೀಯ ಬಳಗದಲ್ಲಿದ್ದವರೆಲ್ಲರೂ ಕೆಲವು ದಿನ ಸೈಲೆಂಟ್ ಆಗಿದ್ದರು. ಅದು ಈಗಲೂ ಮುಂದುವರಿದಿದೆ. ಆದರೆ ಅವರ ಕಷ್ಟ ಕಾಲದಲ್ಲಿ ಅವರಿಗೆ ಹೆಗಲುಕೊಟ್ಟು ನಿಂತಿದ್ದು ಒಬ್ಬರೇ ನಟ.

ದರ್ಶನ್ ಗೆ ಚಿತ್ರರಂಗದಲ್ಲಿ ತಮ್ಮದೇ ಆದ ಗೆಳೆಯರ ಬಳಗವಿದೆ. ಅವರು ಮರ್ಡರ್ ಕೇಸ್ ನಲ್ಲಿ ಬಂಧಿತರಾದಾಗ ಕೆಲವರು ಜಾರಿಕೊಂಡರೆ ಮತ್ತೆ ಕೆಲವರು ಏನೇ ಆದರೂ ನಮ್ಮ ಬಾಸ್ ತಪ್ಪು ಮಾಡಿರಲ್ಲ ಎಂದು ಮಾಧ್ಯಮಗಳ ಮುಂದೆ ಸಮರ್ಥಿಸಿಕೊಂಡೇ ಬಂದಿದ್ದರು.

ಆದರೆ ದರ್ಶನ್ ಜೊತೆಗಿನ ಸ್ನೇಹ ಕೇವಲ ಭೇಟಿಗೆ ಮಾತ್ರ ಸೀಮಿತವಾಗದೇ ಅವರ ಕುಟುಂಬದ ಜೊತೆಗೇ ನಿಂತು ಕಷ್ಟಕ್ಕೆ ಹೆಗಲುಕೊಟ್ಟಿದ್ದು ನಟ ಧನ್ವೀರ್ ಗೌಡ ಮಾತ್ರ. ಮೊದಲಿನಿಂದಲೂ ದರ್ಶನ್ ಅಭಿಮಾನಿ ಎಂದೇ ಗುರುತಿಸಿಕೊಂಡಿದ್ದ ಧನ್ವೀರ್ ಚಿತ್ರರಂಗಕ್ಕೆ ಕಾಲಿಡಲು ದರ್ಶನ್ ಸಹಾಯ ಪಡೆದಿದ್ದರು. ಅವರ ಬೆಂಬಲದಿಂದಲೇ ಇಂದು ತಕ್ಕ ಮಟ್ಟಿಗೆ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ.

ಆದರೆ ಈ ಸಹಾಯಕ್ಕೆ ಅವರು ಹತ್ತರಷ್ಟು ವಾಪಸ್ ಮಾಡಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಜೊತೆಗೆ ಪರಪ್ಪನ ಅಗ್ರಹಾರ, ಬಳ್ಳಾರಿ ಜೈಲಿಗೆ ಹೋಗಿ ಬರುತ್ತಿದ್ದ ಕೆಲಸದ ಜೊತೆಗೆ ಕೊನೆಯಲ್ಲಿ ಶ್ಯೂರಿಟಿ ಕೊಡಲೂ ಅವರೇ ಬಂದಿದ್ದರು. ದರ್ಶನ್ ಬಿಡುಗಡೆಯಾಗಿ ಮನೆಗೆ ಹೋಗುವಾಗ ಡ್ರೈವರ್ ಕೆಲಸವನ್ನೂ ಮಾಡಿದ್ದರು. ಈಗ ದರ್ಶನ್ ಆಸ್ಪತ್ರೆಗೆ ದಾಖಲಾಗುವಾಗಲೂ ಅವರು ಜೊತೆ ನಿಂತಿದ್ದಾರೆ. ಈ ಮೂಲಕ ದರ್ಶನ್ ಅಭಿಮಾನಿಗಳ ಹೃದಯವನ್ನೂ ಧನ್ವೀರ್ ಗೆದ್ದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಿಟ್ ಆ್ಯಂಡ್ ರನ್ ಕೇಸ್ ಸಂಬಂಧ ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

ಕಾಂತಾರ ವೀಕ್ಷಿಸಿದ ಅಲ್ಲು ಅರ್ಜುನ್, ಸಿನಿಮಾ ಬಗ್ಗೆ ಹೀಗೆ ಬರೆದಿದ್ದಾರೆ

BB Season 12: ಹೊಸ ಆಟ ಶುರು ಮಾಡಿದ ಅಶ್ವಿನಿ ಗೌಡ ಕಾಟಕ್ಕೆ ಮನೆ ಮಂದಿ ಸುಸ್ತು

ನಾಳೆಯಿಂದ ಕಾಮಿಡಿ ಕಿಲಾಡಿಗಳು ಶೋ ಶುರು, ಜಡ್ಜ್ ಯಾರು ಗೊತ್ತಾ

ಅಬ್ ಕಿ ಬಾರ್, ಮೋದಿ ಸರ್ಕಾರ್ ಘೋಷಣೆ ಹಿಂದಿನ ವ್ಯಕ್ತಿ ಪಿಯೂಷ್ ಪಾಂಡೆ ಇನ್ನಿಲ್ಲ

ಮುಂದಿನ ಸುದ್ದಿ
Show comments