Webdunia - Bharat's app for daily news and videos

Install App

Darshan: ದರ್ಶನ್ ಗೆ ವಿದೇಶಕ್ಕೆ ಹೋಗಲೂ ಅನುಮತಿ ಸಿಕ್ತು, ಇನ್ನೇನು ಬೇಕು

Krishnaveni K
ಶನಿವಾರ, 31 ಮೇ 2025 (11:05 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜಾಮೀನಿನ ಮೇಲೆ ಹೊರಗಡೆಯಿರುವ ನಟ ದರ್ಶನ್ ಗೆ ಈಗ ಶೂಟಿಂಗ್ ನಲ್ಲಿ ಭಾಗಿಯಾಗಲು ವಿದೇಶಕ್ಕೆ ಹೋಗಲು ಕೋರ್ಟ್ ಅನುಮತಿ ನೀಡಿದೆ. ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಗಳಾಗುತ್ತಿವೆ.

ಚಿತ್ರದುರ್ಗದ ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪದಲ್ಲಿ ಬಂಧಿತರಾಗಿರುವ 17 ಆರೋಪಿಗಳಲ್ಲಿ ದರ್ಶನ್ ಎ2 ಆರೋಪಿ. ಎಲ್ಲಾ ಆರೋಪಿಗಳೂ ಈಗ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. 

ನಟ ದರ್ಶನ್ ಈಗ ಡೆವಿಲ್ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕೋರ್ಟ್ ಅನುಮತಿ ಪಡೆದು ರಾಜಸ್ಥಾನ್ ಗೆ ಶೂಟಿಂಗ್ ಗೆ ಹೋಗಿಬಂದಿದ್ದರು. ಇದೀಗ ಡೆವಿಲ್ ಶೂಟಿಂಗ್ ಗಾಗಿ 25 ದಿನಗಳಿಗೆ ವಿದೇಶಕ್ಕೆ ತೆರಳಲು ಅನುಮತಿ ಕೋರಿದ್ದರು. ಅದರಂತೆ ಕೋರ್ಟ್ ಅವರ ಮನವಿಯನ್ನು ಪುರಸ್ಕರಿಸಿದೆ.

ಇದರ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ದರ್ಶನ್ ಕಾಲೆಳೆದಿದ್ದಾರೆ. ವಿದೇಶಕ್ಕೆ ಹೋಗಲೂ ಅನುಮತಿ ಸಿಕ್ಕಾಯ್ತು. ಇನ್ನೇನು, ಕೆಲವು ದಿನ ಆದ ಬಳಿಕ ಕೇಸ್ ನ್ನೇ ಮರೆತು ಬಿಡುತ್ತಾರೆ. ಕೇಸ್ ಕೂಡಾ ಹಳ್ಳ ಹಿಡಿಯುತ್ತದೆ ಎಂದು ಕಿಡಿ ಕಾರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣು ಸಮಾಧಿ ಏಕಾಏಕಿ ತೆರವಿಗೆ ರಿಷಭ್‌ ಶೆಟ್ಟಿ ಖಂಡನೆ: ಕಲಾಸೇವೆಗೆ ಅಗೌರವ ಎಂದು ಡಿವೈನ್ ಸ್ಟಾರ್‌ ಬೇಸರ

ರಾಖಿ ಕಟ್ಟದೆಯೇ ದರ್ಶನ್‌ಗೆ ರಕ್ಷಾ ಬಂಧನದ ಶುಭಕೋರಿದ ನಟಿ ಸೋನಲ್ ಮೊಂಥೆರೋ

ಕಿಚ್ಚ ಸುದೀಪ್ ಭಾವುಕ ಪೋಸ್ಟ್ : ಸಂಕಟ ಆಗ್ತಿದೆ ಎಂದಿದ್ದೇಕೆ ಕಿಚ್ಚ

ಶಂಕಿತ ಡೆಂಗ್ಯೂ ಜ್ವರಕ್ಕೆ ಕರಾವಳಿಯ ಪ್ರತಿಭಾನ್ವಿತ ಕಲಾವಿದ ಬಲಿ

ಸುಬ್ರಹ್ಮಣ್ಯ ಭೇಟಿ ಬೆನ್ನಲ್ಲೇ ಗುಡ್‌ನ್ಯೂಸ್‌ ಕೊಟ್ರಾ ವಿಕ್ಕಿ, ಕತ್ರಿನಾ ಕೈಫ್ ಜೋಡಿ

ಮುಂದಿನ ಸುದ್ದಿ
Show comments