Webdunia - Bharat's app for daily news and videos

Install App

ಕನ್ನಡದ ತಂಟೆಗೆ ಬಂದ್ರೆ... ಕಮಲ್ ಹಾಸನ್ ಗೆ ಬೆಂಡೆತ್ತಿದ ರಚಿತಾ ರಾಮ್: ಶಿವಣ್ಣಗೇ ಗೂಟ ಇಟ್ರಾ ಎಂದ ಫ್ಯಾನ್ಸ್

Krishnaveni K
ಶನಿವಾರ, 31 ಮೇ 2025 (10:05 IST)
Photo Credit: Instagram
ಬೆಂಗಳೂರು: ಕಮಲ್ ಹಾಸನ್ ಕನ್ನಡದ ಬಗ್ಗೆ ಹೇಳಿರುವ ಮಾತು ವಿವಾದವಾಗಿರುವ ಬೆನ್ನಲ್ಲೇ ನಟಿ ರಚಿತಾ ರಾಮ್ ವಿಡಿಯೋ ಮೂಲಕ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ಶಿವಣ್ಣಂಗೇ ಗೂಟ್ ಇಟ್ಟಂಗೆ ಕಾಣ್ತಿದೆ ಎಂದು ಕಾಲೆಳೆದಿದ್ದಾರೆ.

ಥಗ್ಸ್ ಆಫ್ ಲೈಫ್ ಮೂವಿ ಸಿನಿಮಾ ಈವೆಂಟ್ ನಲ್ಲಿ ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ಶಿವಣ್ಣನ ಎದುರೇ ಹೇಳಿದ್ದ ಕಮಲ್ ಈಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ಮೇಲಿನಿಂದ ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ ಎಂದು ಸಮರ್ಥಿಸುತ್ತಾ ಬಂದಿದ್ದಾರೆ.

ಇದೀಗ ವಿವಾದದ ಬಗ್ಗೆ ನಟಿ ರಚಿತಾ ರಾಮ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ‘ಕನ್ನಡ, ಕರ್ನಾಟಕ ಎಂದು ಬಂದರೆ ಪ್ರತಿಯೊಬ್ಬ ಕನ್ನಡಿಗನೂ ಇಮೋಷನ್, ನಮ್ಮ ಭಾಷೆ ಬಗ್ಗೆ ಯಾರಾದರೂ ಟೀಕೆ ಮಾಡ್ತಿದ್ದಾರೆ ಎಂದರೆ ನಾವು ಕನ್ನಡದವರು ಸುಮ್ಮನೇ ಕೂರಕ್ಕಾಗಲ್ಲ ಅಲ್ವಾ? ನಾವು ಎಲ್ಲಾ ಭಾಷೆ ಸಿನಿಮಾ ನೋಡ್ತೀವಿ, ಕಲಾವಿದರನ್ನು ಪ್ರೋತ್ಸಾಹಿಸುತ್ತೇವೆ. ಆದರೆ ನಮ್ಮ ಭಾಷೆ ಬಗ್ಗೆ ಮಾತನಾಡಿದಾಗ ಅದಕ್ಕೆ ನಾವ್ಯಾಕೆ ಧ್ವನಿಯೆತ್ತಬಾರದು. ಚಿಕ್ಕವರು ತಪ್ಪು ಮಾಡಿದಾಗ ದೊಡ್ಡವರು ಕ್ಷಮೆ ಕೇಳುವವರೆಗೂ ಬಿಡಲ್ಲ. ದೊಡ್ಡವರೇ ತಪ್ಪು ಮಾಡಿದ್ರೆ? ತಪ್ಪು ಮಾಡಿ ಆದ ಮೇಲೆ ಕ್ಷಮೆ ಕೇಳುವುದರಲ್ಲಿ ಏನು ತಪ್ಪಿದೆ?’ ಎಂದು ರಚಿತಾ ವಿಡಿಯೋದಲ್ಲಿ ಹೇಳಿದ್ದಾರೆ.

ಅವರ ಈ  ವಿಡಿಯೋ ನೋಡಿದ ನೆಟ್ಟಿಗರು ಯಾಕೋ ಇದು ಶಿವಣ್ಣನಿಗೇ ಗೂಟ ಇಟ್ಟ ಹಾಗಿದೆ. ನೀವು ನಿಜವಾದ ಕನ್ನಡತಿ. ಇದಕ್ಕೇ ನೀವು ಇಷ್ಟವಾಗೋದು ಎಂದು ಕಾಮೆಂಟ್ ಮಾಡಿದ್ದಾರೆ.


 
 
 
 
 
 
 
 
 
 
 
 
 
 
 

A post shared by R R (@rachita_instaofficial)

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಏನಾದ್ರೂ ಸರಿ ನಮ್ಮ ಸಿನಿಮಾ ಕ್ರಿಸ್ ಮಸ್ ಗೇ ಬರೋದು: ಕಿಚ್ಚ ಸುದೀಪ್ ಖಡಕ್ ಮಾತು

ಆಂಕರ್ ಅನುಶ್ರೀ ಮದುವೆಗೆ ಅಶ್ವಿನಿ ಪುನೀತ್ ಗೈರಾಗಿದ್ದಕ್ಕೆ ಶ್ರೀದೇವಿ ಬೈರಪ್ಪ ಅಲ್ಲ ಇವರೇ ಕಾರಣ

ನಟ ಚಿಕ್ಕಣ್ಣ ಮದುವೆ ಫಿಕ್ಸ್: ಉಪಾಧ್ಯಕ್ಷನ ಮನಸ್ಸು ಕದ್ದವಳು ಯಾರು

ಸಿಎಂ ಸಿದ್ದರಾಮಯ್ಯರನ್ನು ದಿಢೀರ್ ಭೇಟಿಯಾದ ತೆಲುಗು ನಟ ರಾಮ್‌ ಚರಣ್‌

ಬರ್ತ್‌ಡೇಗೂ ಮುನ್ನ ಮೈಸೂರಿನಲ್ಲಿ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ಕಿಚ್ಚ ಸುದೀಪ್

ಮುಂದಿನ ಸುದ್ದಿ
Show comments