Publish Date: Sat, 14 Dec 2019 (09:00 IST)
Updated Date: Sat, 14 Dec 2019 (09:02 IST)
ಬೆಂಗಳೂರು: ಮೆಲೊಡಿ ಕಿಂಗ್ ಎಂದೇ ಕರೆಯಿಸಿಕೊಳ್ಳುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಮೇಲೆ ಡಿ ಬಾಸ್ ದರ್ಶನ್ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಇದಕ್ಕೆ ಕಾರಣ ಒಡೆಯ ಸಿನಿಮಾಗೆ ನೀಡಿದ ಸಂಗೀತ.
ಮೊನ್ನೆಯಷ್ಟೇ ಬಿಡುಗಡೆಯಾಗಿರುವ ಒಡೆಯ ಸಿನಿಮಾದ ಹಾಡುಗಳನ್ನು ಸಂಯೋಜಿಸಿದ್ದು ಅರ್ಜುನ್ ಜನ್ಯಾ. ಆದರೆ ಈ ಸಿನಿಮಾದ ಒಂದೇ ಒಂದು ಹಾಡು ಚೆನ್ನಾಗಿಲ್ಲ. ಡಿ ಬಾಸ್ ಸಿನಿಮಾಗೆ ಕಳಪೆ ಹಾಡುಗಳನ್ನು ಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಗರಂ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಸಿಟ್ಟು ಹೊರ ಹಾಕಿದ್ದಾರೆ.
ಡಿ ಬಾಸ್ ಸಿನಿಮಾಗೆ ಹರಿಕೃಷ್ಣ ಅವರೇ ಸಂಗೀತ ಸಂಯೋಜಿಸಬೇಕಿತ್ತು. ಸುದೀಪ್ ಸಿನಿಮಾಗಳಿಗೆ ಅತ್ಯುತ್ತಮ ಹಾಡುಗಳನ್ನು ಕೊಡುವ ಅರ್ಜುನ್ ಜನ್ಯಾ ದರ್ಶನ್ ಸಿನಿಮಾಗೆ ಒಳ್ಳೆಯ ಹಾಡು ಕೊಟ್ಟಿಲ್ಲ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.