ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡುತ್ತಿದ್ದಂತೇ ಇತ್ತ ದರ್ಶನ್ ಅಭಿಮಾನಿಗಳ ದುಃಖ ಮೇರೆ ಮೀರಿದೆ. ನಿಮ್ಮೊಂದಿಗೆ ನಾವಿದ್ದೇವೆ ಬಾಸ್ ಎಂದಿದ್ದಾರೆ.
ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ದರ್ಶನ್ ಆಂಡ್ ಗ್ಯಾಂಗ್ ಬೇಲ್ ರದ್ದಾಗುತ್ತಿದ್ದಂತೇ ಡಿ ಬಾಸ್ ಅಭಿಮಾನಿಗಳೂ ಶಾಕ್ ಗೊಳಗಾಗಿದ್ದಾರೆ. ಮತ್ತೆ ತಮ್ಮ ಬಾಸ್ ಜೈಲು ಸೇರುತ್ತಿದ್ದಾರೆ ಎನ್ನುವ ಬೇಸರದಲ್ಲಿದ್ದಾರೆ. ಡೆವಿಲ್ ಸಿನಿಮಾದ ಹಾಡಿಗೆ ಕಾಯುತ್ತಿದ್ದ ಫ್ಯಾನ್ಸ್ ಗೆ ಡಿಬಾಸ್ ಅರೆಸ್ಟ್ ಆಗುತ್ತಿರುವುದು ಶಾಕ್ ತಂದಿದೆ.
ಇನ್ನು ದರ್ಶನ್ ಮತ್ತೆ ಜೈಲು ಸೇರುತ್ತಾರೆ ಎಂಬ ಸುದ್ದಿ ಬೆನ್ನಲ್ಲೇ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಾಲು ಸಾಲು ಕಾಮೆಂಟ್ ಮಾಡಿದ್ದಾರೆ. ನಮ್ಮ ಬಾಸ್ ಸತ್ತಿಲ್ಲ, ಕೇವಲ ಜೈಲಿಗೆ ಹೋಗುತ್ತಿದ್ದಾರಷ್ಟೇ. ಅವರು ವಾಪಸ್ ಬಂದೇ ಬರುತ್ತಾರೆ ಎಂದಿದ್ದಾರೆ.
ಇನ್ನು, ಕೆಲವರು ಏನೇ ಆದರೂ ನಮ್ಮ ಬಾಸ್ ಜೊತೆಗೆ ನಾವಿದ್ದೇವೆ. ನಿಮಗೆ ಏನೂ ಆಗಲ್ಲ ಬಾಸ್. ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಒಳ್ಳೆಯ ಸಮಯ ಬರುವವರೆಗೂ ಕಾಯಬೇಕು ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬೆಂಬಲಿಸಿ ಮಾತನಾಡಿದ್ದಾರೆ.