Select Your Language

Notifications

webdunia
webdunia
webdunia
webdunia

ಜೀಪ್ ನಲ್ಲೂ ಬರಲಿಲ್ಲ, ಪತ್ನಿ ಬಳಿಯೂ ಬರಲಿಲ್ಲ, ದರ್ಶನ್ ಪ್ಲ್ಯಾನ್ ಏನು

ನಟ ದರ್ಶನ್ ಅರೆಸ್ಟ್

Sampriya

ಬೆಂಗಳೂರು , ಗುರುವಾರ, 14 ಆಗಸ್ಟ್ 2025 (16:03 IST)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ  ದರ್ಶನ್‌ಗೆ ಎರಡನೇ ಬಾರೀ ಜೈಲೂಟವೇ ಫಿಕ್ಸ್ ಆಗಿದೆ. ನಟ ದರ್ಶನ್ ಸೇರಿದಂತೆ 7 ಆರೋಪಿಗಳ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡುತ್ತಿದ್ದ ಹಾಗೇ, ಪೊಲೀಸರು ಆರೋಪಿಗಳ ಅರೆಸ್ಟ್‌ಗೆ ಬಲೆ ಬೀಸಿದ್ದಾರೆ. 

ಈಗಾಗಲೇ ದರ್ಶನ್ ಗೆಳತಿ ಪವಿತ್ರಾ ಗೌಡ ಸೇರಿದಂತೆ ನಾಲ್ಕು ಮಂದಿಯನ್ನು ಪೊಲೀಸರು ಪ್ರಶ್ನೆ ಮಾಡಿದ್‌ದಾರೆ. ಈ ಎಲ್ಲದರ ಮಧ್ಯೆ ದರ್ಶನ್ ಮಾತ್ರ ಎಲ್ಲಿ ಇದ್ದಾರೆಂಬ ಮಾಹಿತಿ ಮಾತ್ರ ಪೊಲೀಸರಿಗೆ ಸಿಗ್ತಿಲ್ಲಾ.  ದರ್ಶನ್‌ ಅವರ ಅರೆಸ್ಟ್‌ಗೆ ಅವರ ಪತ್ನಿ ಮನೆ ಬಳಿ, ದರ್ಶನ್ ಮನೆ ಬಳಿ ಹಾಗೂ ಮೈಸೂರಿನ ಫಾರ್ಮ್‌ಹೌಸ್‌ನಲ್ಲೂ ಪೊಲೀಸರ ತಂಡ ಕಾದು ಕುಳಿತಿದೆ. 

ಈ ನಡುವೆ ದರ್ಶನ್ ತಮಿಳುನಾಡಿಗೆ ತೆರಳಿದ್ದ ಎನ್ನಲಾದ ಜೀಪು ಹೊಸಕೆರೆಹಳ್ಳಿಯಲ್ಲಿರುವ ವಿಜಯಲಕ್ಷ್ಮಿ ಪ್ಲಾಟ್‌ಗೆ ಬಂದಿದೆ. ಆದರೆ ಅದರಲ್ಲಿ ದರ್ಶನ್ ಇರಲಿಲ್ಲೆ ಎಂಬ ಮಾಹಿತಿ ತಿಳಿದುಬಂದಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ದರ್ಶನ್ ನೇರವಾಗಿ ಕೋರ್ಟ್‌ಗೆ ಶರಣಾಗುವ ಸಾಧ್ಯತೆಯಿದೆ ಎನ್ನಲಾಗಿದೆ. 



Share this Story:

Follow Webdunia kannada

ಮುಂದಿನ ಸುದ್ದಿ

ಜೈಲು ಸೇರುತ್ತಿದ್ದರೂ ಒಂಚೂರು ಬದಲಾಗದ ಪವಿತ್ರಾ ಗೌಡ ವರಸೆ, ಸುಬ್ಬಿ ಗರಂ ಆಗಿದ್ಯಾಕೆ