ಡಿ ಬಾಸ್ ಬಿಡುಗಡೆಯಾಗುವವರೆಗೂ ಮಾರ್ಟಿನ್, ಭೀಮ ಎಕ್ಸ್ ವೈ ಝೆಡ್ ಸಿನಿಮಾ ನೋಡಬೇಡಿ: ದರ್ಶನ್ ಫ್ಯಾನ್ಸ್ ಹೊಸ ವರಾತ

Krishnaveni K
ಬುಧವಾರ, 7 ಆಗಸ್ಟ್ 2024 (11:05 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟ ದರ್ಶನ್ ಗಾಗಿ ಅವರ ಫ್ಯಾನ್ಸ್ ಈಗ ಹೊಸ ವರಾತ ಶುರು ಮಾಡಿಕೊಂಡಿದ್ದಾರೆ. ತಮ್ಮ ಬಾಸ್ ಬಿಡುಗಡೆಯಾಗುವವರೆಗೂ ಕನ್ನಡದ ಯಾವ ಸಿನಿಮಾಗಳನ್ನೂ ನೋಡಬೇಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಕರೆ ನೀಡುತ್ತಿದ್ದಾರೆ.

ದರ್ಶನ್ ಬಂಧನವಾದ ಬಳಿಕ ಅವರ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಅಭಿಮಾನ ಪ್ರದರ್ಶಿಸುತ್ತಲೇ ಇದ್ದಾರೆ. ಕೆಲವರು ಅವರ ಪರವಾಗಿ ಪೂಜೆ ಮಾಡಿಸುತ್ತಿದ್ದರೆ ಮತ್ತೆ ಕೆಲವರು ಅವರ ಹೆಸರಿನಲ್ಲಿ ಹಚ್ಚೆ ಹಾಕಿಸಿಕೊಳ್ಳುವುದು, ಅವರಿಗಾಗಿ ವ್ರತ ಮಾಡುವುದು ಎಲ್ಲಾ ಸಾಕಷ್ಟು ನಡೆಯುತ್ತಲೇ ಇದೆ.

ಈ ನಡುವೆ ದರ್ಶನ್ ಫ್ಯಾನ್ಸ್ ಇದೀಗ ತಮ್ಮ ಬಾಸ್ ಬಿಡುಗಡೆಯಾಗುವವರೆಗೂ ಕನ್ನಡ ಸಿನಿಮಾಗಳನ್ನೇ ನೋಡಬೇಡಿ ಎಂದು ಟ್ರೆಂಡ್ ಮಾಡುತ್ತಿದ್ದಾರೆ. ಇದೀಗ ಸ್ಯಾಂಡಲ್ ವುಡ್ ನಲ್ಲಿ ಧ್ರುವ ಸರ್ಜಾ ನಾಯಕರಾಗಿರುವ ಮಾರ್ಟಿನ್, ದುನಿಯಾ ವಿಜಯ್ ನಾಯಕರಾಗಿವು ಭೀಮ, ಗಣೇಶ್ ನಾಯಕರಾಗಿರುವ ಕೃಷ್ಣಂ ಪ್ರಿಯ ಸಖಿ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿ ನಿಂತಿವೆ.

ಆದರೆ ಬಾಸ್ ಬರುವವರೆಗೂ ಮಾರ್ಟಿನ್, ಭೀಮ ಎಕ್ಸ್ ವೈ ಝೆಡ್ ಏನೇ ಸಿನಿಮಾ ಬಂದರೂ ಥಿಯೇಟರ್ ಗೆ ಹೋಗಿ ನೋಡಬೇಡಿ ಎಂದು ದರ್ಶನ್ ಫ್ಯಾನ್ಸ್ ಕರೆ ನೀಡುತ್ತಿದ್ದಾರೆ. ಇದು ಧ್ರುವ ಸರ್ಜಾ ಅಭಿಮಾನಿಗಳನ್ನು ಕೆರಳಿಸಿದೆ. ದರ್ಶನ್ ಮತ್ತು ಧ್ರುವ ನಡುವೆ ಕೆಲವು ದಿನಗಳ ಹಿಂದೆ ಶೀತಲ ಸಮರ ನಡೆದಿತ್ತು. ಇದೇ ಕಾರಣಕ್ಕೆ ಈಗ ಫ್ಯಾನ್ಸ್ ಕಿತ್ತಾಡುತ್ತಿದ್ದಾರೆ. ಅದರಲ್ಲೂ ಧ್ರುವ ಫ್ಯಾನ್ಸ್ ಅವರನ್ನೇ ಡಿ ಬಾಸ್ ಎಂದಿರುವುದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ. ಈ ಕಾರಣಕ್ಕೇ ಮಾರ್ಟಿನ್ ನೋಡಬೇಡಿ ಎಂದು ಪ್ರಚಾರ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಂಧನಕ್ಕೊಳಗಾದ ನೀಲಿ ತಾರೆ, ಓನ್ಲಿ ಫ್ಯಾನ್ಸ್ ಸ್ಟಾರ್ ಬೋನಿ, ಆರೋಪ ಸಾಬೀತಾದಲ್ಲಿ 15ವರ್ಷ ಜೈಲೂಟ

ಮಗುವಿನ ಆಗಮನದ ಖುಷಿಯಲ್ಲಿ ಪ್ಯಾಟೆ ಹುಡುಗಿ ಹಳ್ಳಿ ಲೈಫ್‌ನ ಸುಷ್ಮಾ ರಾಜ್‌

ರಿಷಬ್ ಕಾಲ ಮೇಲೆ ಮಲಗಿದ್ದು ದೈವವಲ್ಲ ಬದಲಾಗಿ ನರ್ತಕ, ಭಾರೀ ಟೀಕೆ

ಅಪ್ಪ ಇಲ್ಲದಿದ್ದರು, 90ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಧರ್ಮೇಂದ್ರ ಮಕ್ಕಳು

ದಿಲೀಪ್ ಪರ ತೀರ್ಪು ಹೊರಬೀಳುತ್ತಿದ್ದ ಹಾಗೇ ವಾವ್ಹ್‌ ಜಸ್ಟ್‌ ವಾವ್ಹ್‌ ಎಂದ ಗಾಯಕಿ

ಮುಂದಿನ ಸುದ್ದಿ
Show comments