ಸಂಕ್ರಾಂತಿಗೆ ಹೊಸ ಸುದ್ದಿ ಕೊಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್

ಭಾನುವಾರ, 12 ಜನವರಿ 2020 (09:15 IST)
ಬೆಂಗಳೂರು: ಈಗಾಗಲೇ ಈ ಸಂಕ್ರಾಂತಿ ಹಬ್ಬಕ್ಕೆ ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ತಮ್ಮ ತಮ್ಮ ಸಿನಿಮಾಗಳ ಪೋಸ್ಟರ್ ಬಿಡುಗಡೆ ವಿಚಾರವನ್ನು ತಿಳಿಸಿ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಅದರ ಬೆನ್ನಲ್ಲೇ ದರ್ಶನ್ ಕಡೆಯಿಂದಲೂ ಗುಡ್ ನ್ಯೂಸ್ ಬಂದಿದೆ.


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಎರಡನೇ ಪೋಸ್ಟರ್ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ. ಕ್ರಿಸ್ ಮಸ್ ಹಬ್ಬದ ವೇಳೆ ಮೊದಲನೇ ಪೋಸ್ಟರ್ ಬಿಡುಗಡೆಯಾಗಿತ್ತು.

ರಾಬರ್ಟ್ ಟೀಸರ್ ದರ್ಶನ್ ಬರ್ತ್ ಡೇ ದಿನ ಬಿಡುಗಡೆ ಮಾಡುವುದಾಗಿ ಈಗಾಗಲೇ ಚಿತ್ರತಂಡ ಹೇಳಿತ್ತು. ಆದರೆ ಸಂಕ್ರಾಂತಿಗೆ ಅಭಿಮಾನಿಗಳಿಗೆ ಖುಷಿ ಕೊಡಲು ಎರಡನೇ ಪೋಸ್ಟರ್ ಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟಿವಿಯಲ್ಲಿ ಇಂದು ಕಿಚ್ಚ ಸುದೀಪ್ ಪೈಲ್ವಾನ, ನೀನಾಸಂ ಸತೀಶ್ ‘ಬ್ರಹ್ಮಚಾರಿ’ ದರ್ಶನ