Publish Date: Sat, 13 Feb 2021 (09:59 IST)
Updated Date: Sat, 13 Feb 2021 (10:01 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಾಳೆ ರಿಯಲ್ ಲೈಫ್ ನಲ್ಲೂ ಜೋಡಿ ಜೀವಗಳಾಗುತ್ತಿದ್ದಾರೆ. ನಾಳೆ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಲವ್ ಮಾಕ್ಟೇಲ್ ಜೋಡಿ ಇನ್ ಸ್ಟಾಗ್ರಾಂನಲ್ಲೇ ರೊಮ್ಯಾಂಟಿಕ್ ಮೆಸೇಜ್ ಹಂಚಿಕೊಂಡಿದ್ದಾರೆ.
Photo: Milana Nagaraj Twitter page
ಮಿಲನಾ ನಾಗರಾಜ್ ಅರಶಿನ ಶಾಸ್ತ್ರಕ್ಕೆ ರೆಡಿಯಾಗಿ ಕೂತಿರುವ ಸುಂದರ ಪ್ರಕಟಿಸಿದ ಕೃಷ್ಣ, ನನ್ನ ಸುಂದರ ಕನ್ಯೆಗೆ ಕಾಯುತ್ತಿರುವೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಿಲನಾ ಬರ್ತಾ ಇದ್ದೀನಿ ಎಂದು ಸ್ಮೈಲ್ ಕೊಟ್ಟಿದ್ದಾರೆ. ಇವರಿಬ್ಬರ ಇನ್ ಸ್ಟಾ ರೊಮ್ಯಾನ್ಸ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.