Publish Date: Fri, 14 Aug 2020 (12:50 IST)
Updated Date: Fri, 14 Aug 2020 (12:51 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ಅಭಿನಯಿಸುತ್ತಿರುವ ಲವ್ ಮಾಕ್ ಟೈಲ್ ಸಿನಿಮಾದ ಎರಡನೇ ಭಾಗದ ಫಸ್ಟ್ ಲುಕ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಈ ಬಗ್ಗೆ ಸ್ವತಃ ಕೃಷ್ಣ ಮಾಹಿತಿ ನೀಡಿದ್ದಾರೆ. ಲಾಕ್ ಡೌನ್ ವೇಳೆ ಕೃಷ್ಣ ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿಸಿದ್ದರು. ಈಗ ಚಿತ್ರರಂಗ ನಿಧಾನವಾಗಿ ಶೂಟಿಂಗ್ ಮೋಡ್ ಗೆ ಬರುತ್ತಿದ್ದು, ಸದ್ಯದಲ್ಲೇ ಫಸ್ಟ್ ಲುಕ್ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಈಗಾಗಲೇ ಚಿತ್ರದ ಮುಹೂರ್ತ ಸಮಾರಂಭವೂ ನೆರವೇರಿದೆ. ಇನ್ನೇನಿದ್ದರೂ ಚಿತ್ರೀಕರಣ ಆರಂಭವಾಗುವದಷ್ಟೇ ಬಾಕಿ. ಅದೂ ಸದ್ಯದಲ್ಲೇ ಆರಂಭವಾಗಲಿದೆ.