Publish Date: Sat, 02 Jan 2021 (11:22 IST)
Updated Date: Sat, 02 Jan 2021 (11:24 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಪಿಆರ್ ಕೆ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಸಿನಿಮಾಗೆ ಡ್ಯಾನಿಶ್ ಸೇಠ್ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಇದಕ್ಕೂ ಮೊದಲು ಪಿಆರ್ ಕೆ ಪ್ರೊಡಕ್ಷನ್ ನ ಫ್ರೆಂಚ್ ಬಿರಿಯಾನಿ ಸಿನಿಮಾಗೆ ಡ್ಯಾನಿಶ್ ನಾಯಕರಾಗಿದ್ದರು. ಇದೀಗ ಮತ್ತೆ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಡ್ಯಾನಿಶ್ ನಾಯಕರಾಗಿರುವುದರ ಬಗ್ಗೆ ಟ್ವಿಟರ್ ನಲ್ಲಿ ವ್ಯಕ್ತಿಯೊಬ್ಬರು ಅವರನ್ನು ಲೈಟಾಗಿ ಕಾಲೆಳೆದಿದ್ದಾರೆ. ಲಾಕ್ ಡೌನ್ ಬಳಿಕ ಬೇರೆ ಚಿತ್ರರಂಗದವರು ಡ್ಯಾನಿಶ್ ಜೊತೆಗೆ ಸಿನಿಮಾ ಮಾಡಬಹುದು ಎಂದು ನಿರೀಕ್ಷಿಸಿದ್ದೆವು. ಪ್ರಶಾಂತ್ ನೀಲ್, ಪವನ್ ಕುಮಾರ್ ಫೀಲ್ ಬಂತು. ಆದರೆ ಮತ್ತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆ ಟೀಮ್ ಅಪ್ ಆಗಿದ್ದೀರಿ ಎಂದು ಹೊಗಳಿಕೆ ಜೊತೆಗೆ ಕಾಲೆಳೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಡ್ಯಾನಿಶ್ ಪುನೀತ್ ಅಣ್ಣ ಬಾಸ್. ನಮ್ಮಂತಹ ಹುಚ್ಚರೊಂದಿಗೆ ಟೀಮ್ ಅಪ್ ಆಗಲು ರೆಡಿಯಾಗುತ್ತಾರೆ. ಅವರನ್ನು ತುಂಬಾ ಇಷ್ಟಪಡುವೆ ಎಂದಿದ್ದಾರೆ.