ಯುವತಿಯ ಮೇಲೆ ರೇಪ್ ಪ್ರಕರಣ: ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಬಂಧನ

Krishnaveni K
ಗುರುವಾರ, 19 ಸೆಪ್ಟಂಬರ್ 2024 (12:24 IST)
ಹೈದರಾಬಾದ್: ತನ್ನ ಜೊತೆ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ನಿರಂತರ ರೇಪ್ ಮತ್ತು ಹಲ್ಲೆ ನಡೆಸಿದ ಆರೋಪದಲ್ಲಿ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಬಂಧಿಸಲಾಗಿದೆ.

ಜಾನಿ ಮಾಸ್ಟರ್ ವಿರುದ್ಧ 21 ವರ್ಷದ ಯುವತಿ ಅತ್ಯಾಚಾರ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗೋವಾದಲ್ಲಿದ್ದ ಜಾನಿ ಮಾಸ್ಟರ್ ರನ್ನು ಅಲ್ಲಿಗೆ ಹೋಗಿ ಪೊಲೀಸರು ಅರೆಸ್ಟ್ ಮಾಡಿ ಹೈದರಾಬಾದ್ ಗೆ ಕರೆತರುತ್ತಿದ್ದಾರೆ ಎನ್ನಲಾಗಿದೆ.

ಜಾನಿ ಮಾಸ್ಟರ್ ತನಗೆ ಅವಕಾಶದ ಅಮಿಷವೊಡ್ಡಿ ಹೈದರಾಬಾದ್, ಚೆನ್ನೈ, ಮುಂಬೈ ಸೇರಿದಂತೆ ಹಲವೆಡೆ ಅತ್ಯಾಚಾರವೆಸಗಿದ್ದಾರೆ. ಬಳಿಕ ಈ ವಿಚಾರ ಯಾರಿಗೂ ಬಾಯಿಬಿಡದಂತೆ ಬೆದರಿಕೆ ಹಾಕಿದ್ದರು. ಅಷ್ಟೇ ಅಲ್ಲದೆ, ಪತ್ನಿ ಜೊತೆ ಮನೆಗೆ ಬಂದು ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದರು ಎಂದು ಯುವತಿ ಆರೋಪಿಸಿದ್ದಳು.

ತಾನು ಹೇಳಿದಂತೆ ಕೇಳದೇ ಇದ್ದರೆ ಅವಕಾಶ ಸಿಗದಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದೂ ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಜಾನಿ ಮಾಸ್ಟರ್ ರನ್ನು ಬಂಧಿಸಲಾಗಿದೆ. ಚಿತ್ರರಂಗದಲ್ಲಿ ಮೀಟೂ ಆರೋಪಗಳ ವಿವಾದಗಳ ಬೆನ್ನಲ್ಲೇ ಖ್ಯಾತ ನೃತ್ಯ ಸಂಯೋಜಕನ ಮೇಲೆ ಆರೋಪ ಕೇಳಿಬಂದಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಾಲಿವುಡ್‌ ನಟ ರಣವೀರ್ ಸಿಂಗ್‌ಗೆ ಮತ್ತೇ ಬೆದರಿಕೆ ಕರೆ

ಅವಳಿ ಮಕ್ಕಳಿಗೆ ನಾಮಕರಣ ಮಾಡಿದ ರಾಮ್‌ಚರನ್‌, ಉಪಾಸನಾ

ಸಾಹಸಸಿಂಹ ಸೇರಿದಂತೆ ಹಲವು ಹಿಟ್‌ ಸಿನಿಮಾ ನೀಡಿದ ನಿರ್ದೇಶಕ ಜೋ ಸೈಮನ್‌ ಇನ್ನಿಲ್ಲ

ಖ್ಯಾತ ಗಾಯಕ ಉದಿತ್ ನಾರಾಯಣ್ ವಿರುದ್ಧ ಮೊದಲ ಪತ್ನಿ ಇದೆಂಥಾ ಆರೋಪ

30ಸಾವಿರ ಜನರ ನಡುವೆ ಕಳೆದುಹೋದ ಮಗುವಿಗೆ ಪೋಷಕರ ಹುಡುಕುವಲ್ಲಿ ಸೋನು ನಿಗಮ್ ಹೇಗೆ ಸಹಾಯ ಮಾಡಿದ್ರೂ ನೋಡಿ, ವಿಡಿಯೋ

ಮುಂದಿನ ಸುದ್ದಿ
Show comments