Webdunia - Bharat's app for daily news and videos

Install App

ದೀಪಾವಳಿ ದಿನವೇ ಡಾಲಿ ಧನಂಜಯ ಧಮಾಕಾ: ಮದುವೆ ಹುಡುಗಿಯ ಪರಿಚಯಿಸಿದ ನಟ

Krishnaveni K
ಶುಕ್ರವಾರ, 1 ನವೆಂಬರ್ 2024 (10:27 IST)
ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ತಮ್ಮ ಮದುವೆ ಬಗ್ಗೆ ಹಲವು ಸಮಯದಿಂದ ಕೇಳಿಬರುತ್ತಿದ್ದ ಪ್ರಶ್ನೆಗಳಿಗೆ ನಟ ಡಾಲಿ ಧನಂಜಯ ಉತ್ತರ ನೀಡಿದ್ದಾರೆ. ಮದುವೆಯಾಗುತ್ತಿರುವ ಹುಡುಗಿ ಯಾರೆಂದು ಸೋಷಿಯಲ್ ಮೀಡಿಯಾದಲ್ಲಿ ಪರಿಚಯಿಸಿದ್ದಾರೆ.

ಡಾಲಿ ಧನಂಜಯ ಸ್ಯಾಂಡಲ್ ವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಅವರು ಎಲ್ಲೇ ಹೋದರೂ ನಿಮ್ಮ ಮದುವೆ ಯಾವಾಗ ಎಂದು ಜನ ಕೇಳುತ್ತಲೇ ಇದ್ದರು. ಇದೀಗ ಡಾಲಿ ತಮ್ಮ ಪ್ರೀತಿಯ ಹುಡುಗಿಯಯನ್ನು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

ಮೈಸೂರು ಮೂಲದ ವೈದ್ಯೆ ಧನ್ಯಾತಾ ಅವರನ್ನು ಧನಂಜಯ ಮದುವೆಯಾಗಲಿದ್ದಾರೆ. ಇಬ್ಬರೂ ಬಹುಕಾಲದಿಂದಲೂ ಆಪ್ತರು. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ತಾವು ಮದುವೆಯಾಗಲಿರುವ ಧನ್ಯಾತಾ ಜೊತೆಗೆ ಫೋಟೋ ಶೂಟ್ ನಡೆಸಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಡಾಲಿ ಧನಂಜಯ ಜೊತೆಗೆ ನಟಿ ಅಮೃತಾ ಅಯ್ಯಂಗಾರ್ ಹೆಸರು ಥಳುಕು ಹಾಕಿಕೊಂಡಿದ್ದು ಇದೆ. ಆದರೆ ಇಬ್ಬರೂ ತಮ್ಮಿಬ್ಬರ ನಡುವೆ ಇರುವುದು ಬರೀ ಸ್ನೇಹ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ತಮ್ಮ ರಿಯಲ್ ಲೈಫ್ ಜೋಡಿಯನ್ನು ಪರಿಚಯಿಸಿರುವ ಧನಂಜಯ  ಎಲ್ಲಾ ರೂಮರ್ ಗಳಿಗೆ ತೆರೆ ಎಳೆದಿದ್ದಾರೆ. ಮೈಸೂರಿನಲ್ಲಿಯೇ ಇಬ್ಬರೂ ವಿವಾಹವಾಗಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮತ್ತೊಂದು ಸಿನಿಮಾ ಘೋಷಿಸಿದ ರಿಷಭ್ ಶೆಟ್ಟಿ: ನೆಟ್ಟಿಗರಿಂದ ಆಕ್ಷೇಪ

ಯುವ ಪತ್ನಿ ವಿಚಾರವೆತ್ತಿದ್ದಕ್ಕೆ ರೊಚ್ಚಿಗೆದ್ದ ದೊಡ್ಮನೆ ಫ್ಯಾನ್ಸ್

ರಮ್ಯಾ, ಪ್ರಥಮ್ ಡಿಬಾಸ್ ಫ್ಯಾನ್ಸ್ ವಾರ್ ಆಗ್ತಿದ್ದರೆ ದರ್ಶನ್ ಎಲ್ಲಿದ್ದಾರೆ ಗೊತ್ತಾ

ಸುಮ್ಮನೇ ಬಿಡುವ ಮಾತೇ ಇಲ್ಲ: ದರ್ಶನ್ 43 ಅಭಿಮಾನಿಗಳಿಗಾಗಿ ಹುಡುಕಾಟ

ರಮ್ಯಾಗೆ ಫ್ಯಾನ್ಸ್ ಅಶ್ಲೀಲ ಮೆಸೇಜ್ ನಿಂದ ಸಂಕಷ್ಟಕ್ಕೆ ಸಿಲುಕುತ್ತಾರಾ ದರ್ಶನ್

ಮುಂದಿನ ಸುದ್ದಿ
Show comments