ಬೆಂಗಳೂರು: ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಅವರು ಇಂದು 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪತ್ನಿ ರಕ್ಷಿತಾಗೆ ಪ್ರೇಮ್ ಅದ್ಧೂರಿಯಾಗಿ ಬರ್ತಡೇ ಪಾರ್ಟಿ ಆಯೋಜಿಸಿದ್ದಾರೆ. ಇದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಟಿ ರಕ್ಷಿತಾ ಜನ್ಮದಿನದಂದು ಕೇಕ್ ಕತ್ತರಿಸಿ ಫ್ಯಾಮಿಲಿ ಜೊತೆ ಪಾರ್ಟಿ ಮಾಡಿದ್ದಾರೆ. ಅಮ್ಮ, ಪತಿ ಪ್ರೇಮ್, ಪುತ್ರ ಹಾಗೂ ಸಹೋದರ ರಾಣಾ ದಂಪತಿ ಕೂಡ ಭಾಗಿಯಾಗಿ ಶುಭಹಾರೈಸಿದ್ದಾರೆ.
ಇನ್ನೂ ಕ್ರೇಜಿ ಕ್ವೀನ್‌ಗೆ ಕನ್ನಡದ ನಟ ನಟಿಯರು ಶುಭಕೋರಿದ್ದಾರೆ. ಒಂದು ಕಾಲದಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ರಕ್ಷಿತಾ ಅವರು 2007ರಲ್ಲಿ ನಿರ್ದೇಶಕ ಪ್ರೇಮ್ ಅವರನ್ನು ಕೈಹಿಡಿದರು. ಈ ದಂಪತಿಗೆ ಸೂರ್ಯ ಎಂಬ ಮಗನಿದ್ದಾನೆ. ಮದುವೆ ಬಳಿಕ ಸಿನಿಮಾದಿಂದ ಅಂತರ ಕಾಯ್ದುಕೊಂಡ ರಕ್ಷಿತಾ ಸದ್ಯ ನಿರ್ಮಾಪಕಿಯಾಗಿ, ರಿಯಾಲಿಟಿ ಶೋ ಜಡ್ಜ್ ಆಗಿ ಕಾಣಿಸುಕೊಳ್ಳುತ್ತಿದ್ದಾರೆ.
2002ರಲ್ಲಿ 'ಅಪ್ಪು' ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ನಾಯಕಿಯಾಗಿ ರಕ್ಷಿತಾ ನಟನೆಗೆ ಎಂಟ್ರಿ ಕೊಟ್ಟರು. ಅವರು ನಟಿಸಿದ ಮೊದಲ ಸಿನಿಮಾನೇ ಸೂಪರ್ ಹಿಟ್ ಆಗಿತ್ತು. ಕನ್ನಡದ ಜೊತೆ ತೆಲುಗು, ತಮಿಳಿನಲ್ಲಿಯೂ ರಕ್ಷಿತಾ ನಟಿಸಿದ್ದರು.