ಚೆನ್ನೈ : ನಟ ವಿಶಾಲ್ ಅವರಿಗೆ ಸಂಕಷ್ಟವೊಂದು ಎದುರಾಗಿದ್ದು, ಅವರ ಅಭಿನಯದ ‘ಚಕ್ರ’ ಸಿನಿಮಾ ಬಿಡುಗಡೆಗೆ ನ್ಯಾಯಾಲಯ ತಡೆಯೊಡ್ಡಿದೆ ಎನ್ನಲಾಗಿದೆ.
ನಟ ವಿಶಾಲ್ ಅಭಿನಯದ ‘ಚಕ್ರ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿತ್ತು. ಆದರೆ ವಿಶಾಲ್ ಅವರ ‘ಆಕ್ಷನ್’ ಸಿನಿಮಾ ನಿರ್ಮಾಪಕರು ‘ಚಕ್ರ’ ಚಿತ್ರ ರಿಲೀಸ್ ಮಾಡಬಾರದೆಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ನಟ ವಿಶಾಲ್ ಅಭಿನಯದ ‘ಆಕ್ಷನ್’ ಸಿನಿಮಾ 44 ಕೋಟಿ ಬಂಡವಾಳದಲ್ಲಿ ನಿರ್ಮಿಸಲಾಗಿತ್ತು. ನಟ ವಿಶಾಲ್ ಚಿತ್ರ ನಷ್ಟವಾದರೆ ಅದನ್ನು ತಾವು ತುಂಬಿಕೊಡುವುದಾಗಿ ಒಪ್ಪಿಕೊಂಡಿದ್ದರು. ಆದರೆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹೀನಾಯವಾಗಿ ಸೋತಿತ್ತು. ಆದರೆ ನಟ ವಿಶಾಲ್ ಒಪ್ಪಂದದಂತೆ ನಷ್ಟವನ್ನು ನೀಡಲಿಲ್ಲ.
ಆದ ಕಾರಣ ನಷ್ಟ ತುಂಬಿಕೊಡುವ ತನಕ ಚಿತ್ರ ಬಿಡುಗಡೆ ಚಿತ್ರ ಬಿಡುಗಡೆ ಮಾಡದಂತೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದು ಇದನ್ನು ನ್ಯಾಯಾಲಯ ಮಾನ್ಯ ಮಾಡಿದೆ ಎನ್ನಲಾಗಿದೆ.