Select Your Language

Notifications

webdunia
webdunia
webdunia
webdunia

ತಮನ್ನಾ ಭಾಟಿಯಾ ಪೋಷಕರಿಗೆ ಕೊರೊನಾ

ತಮನ್ನಾ ಭಾಟಿಯಾ ಪೋಷಕರಿಗೆ ಕೊರೊನಾ
ಹೈದರಾಬಾದ್ , ಗುರುವಾರ, 27 ಆಗಸ್ಟ್ 2020 (09:07 IST)
ಹೈದರಾಬಾದ್ : ಟಾಲಿವುಡ್ ನಟಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಪೋಷಕರಿಗೆ ಕೊರೊನಾ ತಗುಲಿದೆ ಎಂಬುದಾಗಿ ತಿಳಿದುಬಂದಿದೆ.

ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನಿಡಿದ ತಮನ್ನಾ ಅವರು, ನನ್ನ ತಂದೆ ತಾಯಿಗೆ ಕೊರೊನಾ ಲಕ್ಷಣಗಳು ಕಂಡುಬಂದ ಹಿನ್ನಲೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ  ಅವರು ಕೊರೊನಾ ಇರುವುದು ದೃಢಪಟ್ಟಿದೆ. ಹಾಗೇ ತಾವು ಕೂಡ ಪರೀಕ್ಷೆಗೆ ಒಳಪಟ್ಟಿದ್ದು ನೆಗೆಟಿವ್ ಬಂದಿದೆ. ದೇವರ ದಯೆಯಿಂದ ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಹಾಗೇ ತಮನ್ನಾ ಪೋಷಕರು ಬೇಗ ಗುಣಮುಖರಾಗಲಿ ಎಂದು ಟಾಲಿವುಡ್ ನಟಿಯರಾದ ಸಮಂತಾ ಅಕ್ಕಿನೇನಿ, ಕಾಜಲ್ ಅಗರ್ ವಾಲ್,  ಇಶಾ ಗುಪ್ತಾ ಹಲವರು ಪ್ರಾರ್ಥಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಗಪತಿ ಬಾಬು ಕೋಟ್ಯಾಧಿಪತಿಯಾಗಲು ಈ ನಟಿಯೇ ಕಾರಣವಂತೆ