Select Your Language

Notifications

webdunia
webdunia
webdunia
webdunia

ಕೋವಿಡ್ ಸೆಂಟರ್ ನಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಕಾನ್ಸ್ಟೇಬಲ್ ಮೇಲೆ ಸಹೋದ್ಯೋಗಿಯಿಂದ ಅತ್ಯಾಚಾರ

ಕೋವಿಡ್ ಸೆಂಟರ್ ನಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಕಾನ್ಸ್ಟೇಬಲ್ ಮೇಲೆ ಸಹೋದ್ಯೋಗಿಯಿಂದ ಅತ್ಯಾಚಾರ
ರಾಂಚಿ , ಗುರುವಾರ, 27 ಆಗಸ್ಟ್ 2020 (08:47 IST)
ರಾಂಚಿ : ಕೋವಿಡ್ ಸೆಂಟರ್ ನಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಕಾನ್ಸ್ಟೇಬಲ್ ಮೇಲೆ ಆಕೆಯ ಸಹೋದ್ಯೋಗಿ ಅತ್ಯಾಚಾರ ಎಸಗಿದ ಘಟನೆ ಜಮ್ಸೆಡ್ಪುರದ ಸಿಡ್ಗೋರಾ ಕೋವಿಡ್ ಕೇಂದ್ರದಲ್ಲಿ ನಡೆದಿದೆ.

ಕೋವಿಡ್ ಕೇಂದ್ರದಲ್ಲಿ ಭದ್ರತೆಗಾಗಿ ಪೊಲೀಸ್  ಕಾನ್ಸ್ಟೇಬಲ್ ಗಳನ್ನು ನಿಯೋಜಿಸಲಾಗಿತ್ತು. ಆ ವೇಳೆ ಕಾನ್ಸ್ಟೇಬಲ್ ಅನಿಲ್ ಕುಮಾರ್ ಎಂಬಾತ ಮಹಿಳಾ ಕಾನ್ಸ್ಟೇಬಲ್ ಬಳಿ ಬಂದು ಕೆಳ ಮಹಡಿಯಲ್ಲಿ ಕೊರೊನಾ ವೈರಸ್ ಹೆಚ್ಚಾಗಿವೆ. ಮೇಲಿನ ಮಹಡಿ ಸುರಕ್ಷಿತವಾಗಿದೆ ಎಂದು ತೋರಿಸಲು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಸಂತ್ರಸ್ತೆ ಮಂಗಳವಾರ ಪೊಲೀಸರಿಗೆ ಲಿಖಿತ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗುವುದಾಗಿ ನಂಬಿಸಿ ಕಾನ್ ಸ್ಟೇಬಲ್ ನಿಂದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ