Select Your Language

Notifications

webdunia
webdunia
webdunia
webdunia

ಸಮಾನತೆಗಾಗಿ ಕಾಂಗ್ರೆಸ್, RSS ಎರಡನ್ನೂ ಸೋಲಿಸಬೇಕು : ನಟ ಚೇತನ್

ಸಮಾನತೆಗಾಗಿ ಕಾಂಗ್ರೆಸ್, RSS ಎರಡನ್ನೂ ಸೋಲಿಸಬೇಕು : ನಟ ಚೇತನ್
ಬೆಂಗಳೂರು , ಗುರುವಾರ, 9 ಸೆಪ್ಟಂಬರ್ 2021 (15:03 IST)
ಬೆಂಗಳೂರು : ಸಮಾನತೆಗಾಗಿ ಕಾಂಗ್ರೆಸ್ ಹಾಗೂ ಆರ್ ಎಸ್ಎಸ್ ಎರಡನ್ನೂ ಸೋಲಿಸಬೇಕೆಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಫೇಸ್ ಬುಕ್ ಹಾಗೂ ಟ್ವೀಟರ್ ನಲ್ಲಿ ಪೋಸ್ಟ್ ಹಾಕಿರುವ ಚೇತನ್, ಸಮಾಜದಲ್ಲಿ ಸಮಾನತೆ ಬೇಕಾದರೆ ಕಾಂಗ್ರೆಸ್ ಹಾಗೂ ಆರ್ಎಸ್ಎಸ್ ಎರಡನ್ನು ಪರಾಭವಗೊಳಿಸಬೇಕೆಂದು ತಿಳಿದ್ದಾರೆ. ಅಲ್ಲದೇ, ಕಾಂಗ್ರೆಸ್ ಕೂಡ ಬ್ರಾಹ್ಮಣ್ಯವನ್ನು ಸಲಹುವ ಸಂಸ್ಥೆ ಎಂದು ಆರೋಪಿಸಿದ್ದಾರೆ.
1925 ರಲ್ಲಿ ಕಾಂಗ್ರೆಸ್ ನ ಸದಸ್ಯರಾಗಿದ್ದ ಕೆ.ಬಿ.ಹೆಡ್ಗೆವಾರ್ ಆರ್ಎಸ್ಎಸ್ ಸ್ಥಾಪಿಸಿದ್ದರು. ಬಾಲಗಂಗಾಧರ್ ತಿಲಕ್ ಹೆಡ್ಗೆವಾರ್ ಮೇಲೆ ಪ್ರಭಾವ ಬೀರಿದ್ದರು. ಕಾಂಗ್ರೆಸ್- ಆರ್ಎಸ್ ಎಸ್ ಬೆಸೆದುಕೊಂಡೇ ಇವೆ. ಬ್ರಾಹ್ಮಣ್ಯದಿಂದ ಆರ್.ಎಸ್ಎಸ್ ಹಾಗೂ ಕಾಂಗ್ರೆಸ್ ಎರಡಕ್ಕೂ ಲಾಭವಿದೆ. ಹೀಗಾಗಿ ಈ ಎರಡನ್ನೂ ಸೋಲಿಸಬೇಕೆಂದು ತಿಳಿಸಿದರು.
ಇನ್ನು ಕಳೆದ ಕೆಲ ದಿನಗಳ ಹಿಂದೆ ಟ್ವೀಟ್ ಮಾಡಿದ್ದ ಚೇತನ್ ಸಿದ್ದರಾಮಯ್ಯ ಅವರ ಬಗ್ಗೆ ಟೀಕಿಸಿದ್ದರು. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹಾಗೂ ಪ್ರಬಲ ನಾಯಕ. ಆದರೆ, ಬ್ರಾಹ್ಮಣ್ಯವನ್ನು ಆಳವಾಗಿ ಬೇರೂರಿಸಿಕೊಂಡಿರುವ ಜಾತಿವಾದಿ ನಾಯಕ ಎಂದು ಟ್ವೀಟಿಸಿದ್ದರು…


Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶ ಹಬ್ಬಕ್ಕೆ ಸ್ಯಾಂಡಲ್ ವುಡ್ ನಲ್ಲಿ ಚುರುಕಾಗಲಿದೆ ಚಟುವಟಿಕೆ