Publish Date: Mon, 13 Jul 2020 (09:23 IST)
Updated Date: Mon, 13 Jul 2020 (09:24 IST)
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕುಟುಂಬಸ್ಥರು ಈಗ ಕೊರೋನಾಗೆ ತುತ್ತಾಗಿದ್ದಾರೆ. ಮೊದಲಿಗೆ ಬಿಗ್ ಬಿ ಮತ್ತು ಪುತ್ರ ಅಭಿಷೇಕ್ ಗೆ ಮಾತ್ರ ಕೊರೋನಾ ದೃಢಪಟ್ಟಿತ್ತು.
ಆದರೆ ಎರಡನೆಯ ಬಾರಿಗೆ ಪರೀಕ್ಷೆ ನಡೆಸಿದ ಬಳಿಕ ಐಶ್ವರ್ಯಾ ರೈ ಬಚ್ಚನ್ ಮತ್ತು ಪುತ್ರಿ ಆರಾಧ‍್ಯಗೂ ಕೊರೋನಾ ಪೊಸಿಟಿವ್ ಫಲಿತಾಂಶ ಬಂದಿತ್ತು. ಆದರೆ ಈ ಬಗ್ಗೆ ಟ್ವೀಟ್ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಮಾಡಿದ ಟ್ವೀಟ್ ಗೊಂದಲಕ್ಕೆ ಕಾರಣವಾಯಿತು.
ಐಶ್ವರ್ಯಾ ಮತ್ತು ಪುತ್ರಿ ಆರಾಧ‍್ಯಗೂ ಕೊರೋನಾ ತಗುಲಿರುವುದಾಗಿ ಮೊದಲು ಟ್ವೀಟ್ ಮಾಡಿದ್ದ ತೋಪೆ ಕೆಲವೇ ಕ್ಷಣಗಳಲ್ಲಿ ಅದನ್ನು ಡಿಲೀಟ್ ಮಾಡಿದರು. ಹೀಗಾಗಿ ಗೊಂದಲ ಉಂಟಾಯಿತು. ಆದರೆ ಐಶ್ವರ್ಯಾ ಮತ್ತು ಆರಾಧ‍್ಯ ಕೂಡಾ ಕೊರೋನಾ ಸೋಂಕಿತರಾಗುವುದು ದೃಢವಾಗಿದ್ದು, ಇದೀಗ ಬಿಗ್ ಬಿ ನಿವಾಸವನ್ನು ಸೀಲ್ ಡೌನ್ ಮಾಡಲಾಗಿದೆ.