Publish Date: Sat, 27 Feb 2021 (11:11 IST)
Updated Date: Sat, 27 Feb 2021 (11:13 IST)
ಮುಂಬೈ : ಸ್ಲಮ್ ಡಾಗ್ ಮಿಲಿಯನೇರ್ ಚಿತ್ರದಲ್ಲಿ ನಟಿಸಿದ ಜನಪ್ರಿಯ ಯುವ ನಟ ಮಾಧುರ್ ಮಿತ್ತಲ್ ಅವರ ಮೇಲೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಟ ಮಾಧುರ್ ಮಿತ್ತಲ್ ತಮ್ಮ ಮಾಜಿ ಗೆಳತಿಯ ಮನೆಗೆ ನುಗ್ಗಿ ನಿಂದಿಸಿ ಗಾಯಗೊಳಿಸಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಮದ್ಯದ ಪ್ರಭಾವದಿಂದ ನಟ ಗೆಳತಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಎಸಗಲು ಮುಂದಾಗಿದ್ದು, ಈ ಹಿನ್ನಲೆಯಲ್ಲಿ ಗೆಳತಿ ಆತನಿಂದ ಬೇರೆಯಾಗಿದ್ದಾಳೆ. ಇದರಿಂದ ಕೋಪಗೊಂಡ ನಟ ಇಂತಹ ಘೋರ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.