Publish Date: Wed, 30 Sep 2020 (11:40 IST)
Updated Date: Wed, 30 Sep 2020 (11:43 IST)
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಬಾಲಿವುಡ್ ನಟಿಯೊಬ್ಬರು ಆಗ್ರಹ ಮಾಡಿದ್ದಾರೆ.
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಮಾನಭಂಗ ಹಾಗೂ ಕೊಲೆ ಕೇಸ್ ಖಂಡಿಸಿರುವ ನಟಿ ಸ್ವರಾ ಭಾಸ್ಕರ್ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
19 ವರ್ಷದ ಯುವತಿ ಮೇಲೆ ನಾಲ್ವರಿಂದ ದೌಜನ್ಯ ನಡೆದು ಯುವತಿ ಸಾವನ್ನಪ್ಪಿದ್ದಾಳೆ.
ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗ್ಯಾಂಗ್ ವಾರ್, ನಕಲಿ ಎನ್ ಕೌಂಟರ್ ಗಳು ಹೆಚ್ಚಿವೆ ಎಂದು ನಟಿ ಸ್ವರಾ ಭಾಸ್ಕರ್ ಆರೋಪಿಸಿದ್ದಾರೆ.