Daily Horoscope

Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನ ನೋಡಿ ಸಿಎಂ ಸಿದ್ದರಾಮಯ್ಯ ಶಾಕ್

Gilli Nata-Siddaramaiah
Photo Credit: X
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ರ ವಿಜೇತರಾಗಿದ್ದ ಗಿಲ್ಲಿ ನಟ ಇಂದು ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಗಿಲ್ಲಿ ನಟನ ಬಗ್ಗೆ ತಿಳಿದು ಸಿಎಂ ಶಾಕ್ ಆಗಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12 ರ ಫೈನಲ್ ನಲ್ಲಿ ಗಿಲ್ಲಿಗೆ ಬಂದಷ್ಟು ವೋಟ್ ಇದುವರೆಗೆ ಯಾರಿಗೂ ಬಂದಿರಲಿಲ್ಲ. ಸುಮಾರು 45 ಕೋಟಿ ವೋಟ್ ಬಂದಿದೆ ಎಂದು ಗಿಲ್ಲಿ ಹೇಳಿದಾಗ ಸಿಎಂ ಶಾಕ್ ಆಗಿದ್ದಾರೆ. ತುಂಬಾ ಜನಪ್ರಿಯವಾಗಿರುವ ಪ್ರೋಗ್ರಾಂ ಇದು. ಇದುವರೆಗೆ ಇಷ್ಟು ಯಾರೂ ತೆಗೆದುಕೊಂಡಿರಲಿಲ್ಲ ಎಂದಿದ್ದಾರೆ.

ಇನ್ನು ಗಿಲ್ಲಿ ನಟನ ಕುಟುಂಬ, ಮನೆಯ ಸ್ಥಿತಿ ಗತಿ ಬಗ್ಗೆಯೂ ಸಿಎಂ ಕೇಳಿ ತಿಳಿದುಕೊಂಡಿದ್ದಾರೆ. ಈ ವೇಳೆ ಗಿಲ್ಲಿ ನಟನ ಸಹೋದರನೂ ಜೊತೆಯಾಗಿದ್ದಾರೆ. ಅವರನ್ನೂ ಸಿಎಂ ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಗಿಲ್ಲಿ ನಟನಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ. ಈ ವೇಳೆ ಹಾರ ಹಾಕಿ ಸನ್ಮಾನವನ್ನೂ ಮಾಡಿದ್ದಾರೆ.

ಈ ಹಿಂದಿನ ಸೀಸನ್ ನಲ್ಲಿಯೂ ಬಿಗ್ ಬಾಸ್ ವಿಜೇತರಾದಾಗ ಕಾರ್ತಿಕ್, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಇದೀಗ ಗಿಲ್ಲಿ ನಟ ಸಿಎಂ ಭೇಟಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಒಂದು ಪೋಸ್ಟ್ ನಿಂದ ಗಂಡನ ಜೊತೆಗಿಲ್ವಾ ಎಂದವರಿಗೆ ಉತ್ತರ ಕೊಟ್ಟ ನಟಿ ಭಾವನಾ ಮೆನನ್