ನಂದಗಡ: ಮರಾಠಿಯಲ್ಲಿ ಭಾಷಣ ಮಾಡಿದ ಖಾನಾಪುರ ಶಾಸಕ ವಿಠ್ಠಲ ಹಲಗೇಕರಗೆ ಸಿಎಂ ಸಿದ್ದರಾಮಯ್ಯ ಅದೇ ವೇದಿಕೆಯಲ್ಲಿ ಕನ್ನಡ ಪಾಠ ಮಾಡಿದರು. ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡ ಕಲಿಯಲೇಬೇಕು ಎಂದು ಕನ್ನಡ ವಿರೋಧಿ ಎಂಇಎಸ್ ನಾಯಕರಿಗೆ ಎಚ್ಚರಿಕೆ ನೀಡಿದರು.
ಖಾನಾಪುರ ತಾಲ್ಲೂಕಿನ ನಂದಗಡ ಗ್ರಾಮದಲ್ಲಿ ಸೋಮವಾರ ರಾಯಣ್ಣನ 'ವೀರಭೂಮಿ' ವಸ್ತು ಸಂಗ್ರಹಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡ ಕಲಿಯುವಂಥ ವಾತಾವರಣ ನಿರ್ಮಾಣವಾಗಬೇಕು. ಯಾರು ಎಲ್ಲಿಂದಲೂ ಬರಲಿ, ಎಲ್ಲೇ ಹೋಗಲಿ ಕನ್ನಡ ನೆಲದ ಹೆಸರು ಹೇಳುವ ಮುನ್ನ ಕನ್ನಡ ಕಲಿಯತಕ್ಕದ್ದು. ಅದನ್ನು ನಾವು ಅನಿವಾರ್ಯ ಮಾಡಬೇಕು. ಆಗ ಮಾತ್ರ ಕರ್ನಾಟಕ ಏಕೀಕರಣ ಸಾಧ್ಯ ಎಂದು ಹೇಳಿದರು.
ಇನ್ನೂ ಇದೇ ವೇದಿಕೆಯಲ್ಲಿ ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಮರಾಠಿಯಲ್ಲಿ ಮಾತು ಆರಂಭಿಸಿದಾಗ, ಜನಸ್ತೋಮದಿಂದ ಕೂಗಾಟ, ಚೀರಾಟ ಆರಂಭವಾಯಿತು.