Publish Date: Mon, 23 Oct 2017 (08:48 IST)
Updated Date: Mon, 23 Oct 2017 (08:51 IST)
ಬೆಂಗಳೂರು: ಅಣ್ಣ ಚಿರು ಸರ್ಜಾ ಮತ್ತು ಭಾವೀ ಅತ್ತಿಗೆ ಮೇಘನಾ ರಾಜ್ ನಿಶ್ಚಿತಾರ್ಥದ ಸಂಭ್ರಮವನ್ನು ಸಹೋದರ, ನಾಯಕ ನಟ ಧ್ರುವ ಸರ್ಜಾ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅಣ್ಣ ಮತ್ತು ಭಾವೀ ಅತ್ತಿಗೆಯ ಫೋಟೋ ಹಾಕಿರುವ ಧ್ರುವ ಸರ್ಜಾ ಇಬ್ಬರಿಗೂ ಅಭಿನಂದನೆ ತಿಳಿಸಿದ್ದಾರೆ. ನಿನ್ನೆ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಅರ್ಜುನ್ ಸರ್ಜಾ ಕುಟುಂಬ ವರ್ಗ ಸೇರಿದಂತೆ ಚಿತ್ರರಂಗದ ದಂಡೇ ಮೆರೆದಿತ್ತು.
ಸ್ಯಾಂಡಲ್ ವುಡ್ ನ ಬಹುತೇಕ ಕಲಾವಿದರು ನಿಶ್ಚಿತಾರ್ಥದ ನಂತರ ಪ್ಯಾಲೇಸ್ ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇಷ್ಟೇ ಅಲ್ಲದೆ, ಚಿತ್ರರಂಗದ ಅನೇಕ ಸ್ನೇಹಿತರು ಚಿರು ಮತ್ತು ಮೇಘನಾಗೆ ಸಾಮಾಜಿಕ ಜಾಲತಾಣದ ಮೂಲಕ ಶುಭ ಹಾರೈಸಿದ್ದಾರೆ. ಇವರಿಬ್ಬರು ಡಿಸೆಂಬರ್ ನಲ್ಲಿ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ