Webdunia - Bharat's app for daily news and videos

Install App

ಚಂದನ್ ಶೆಟ್ಟಿ, ನಿವೇದಿತಾ ನಡುವೆ ಪತಿ-ಪತ್ನಿ ಸಂಬಂಧವೇ ಇರಲಿಲ್ಲ: ಲಾಯರ್ ನೀಡಿದ ಹೇಳಿಕೆ

Krishnaveni K
ಶನಿವಾರ, 8 ಜೂನ್ 2024 (16:15 IST)
Photo Credit: Instagram
ಬೆಂಗಳೂರು: ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಡುವಿನ ವಿಚ್ಛೇದನ ಸಡನ್ ಆಗಿ ಹೇಗೆ ಆಯ್ತು, ಇಷ್ಟು ಬೇಗ ಇಬ್ಬರಿಗೂ ಹೇಗೆ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿತು ಎಂದು ಎಲ್ಲರೂ ಅಚ್ಚರಿಪಟ್ಟಿದ್ದರು. ಆದರೆ ಅಸಲಿ ಸತ್ಯ ಬೇರೆಯೇ ಇದೆ.

ಚಂದನ್ ಶೆಟ್ಟಿ ಮತ್ತು ನಿವೇದಿತಾ ನಡುವೆ ಕಳೆದ ಒಂದು ವರ್ಷದಿಂದ ಎಲ್ಲವೂ ಸರಿಯಿಲ್ಲ.ಒಂದು ವರ್ಷದ ಹಿಂದೆಯೇ ಅವರು ಬೇರೆಯಾಗುವ ತೀರ್ಮಾನಕ್ಕೆ ಬಂದಿದ್ದರು. ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸಿದರೂ ಅವರು ಸರಿ ಹೋಗಲು ಸಾಧ್ಯವೇ ಇಲ್ಲ ಎನಿಸಿದಾಗ ಬೇರೆಯಾಗಲು ತೀರ್ಮಾನಿಸಿದರು ಎಂದು ಅವರ ಪರ ಲಾಯರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಅಷ್ಟೇ ಅಲ್ಲ,ದೆ ಇಷ್ಟು ಬೇಗ ಕೋರ್ಟ್ ವಿಚ್ಛೇದನ ನೀಡಲು ಸಾದ್ಯವಿಲ್ಲ ಎಂಬ ಅನುಮಾನಗಳಿಗೂ ಅವರು ಉತ್ತರ ನೀಡಿದ್ದಾರೆ. ಚಂದನ್ ಮತ್ತು ನಿವೇದಿತಾ ಕಳೆದ ಆರು ತಿಂಗಳಿನಿಂದ ಪತಿ-ಪತ್ನಿಯ ಸಂಬಂಧ ನಡೆಸುತ್ತಿಲ್ಲ. ಇಬ್ಬರೂ ಜೊತೆಯಾಗಿರಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯಲ್ಲಿದ್ದರು. ಹೀಗಾಗಿ ವಿಚ್ಛೇದನಕ್ಕೆ ಮುಂದಾದರು ಎಂದಿದ್ದಾರೆ.

ಇನ್ನು ನಿವೇದಿತಾ ಯಾವುದೇ ಜೀವನಾಂಶಕ್ಕೆ ಬೇಡಿಕೆಯಿಟ್ಟಿಲ್ಲ. ಅಲ್ಲದೆ ಇಬ್ಬರಿಗೂ ಮಕ್ಕಳೂ ಇಲ್ಲ. ಹೀಗಾಗಿ ವಿಚ್ಛೇದನ ಪ್ರಕ್ರಿಯೆ ಸುಲಭವಾಗಿ ಮುಗಿದಿದೆ. ಚಂದನ್ ಮತ್ತು ನಿವೇದಿತಾ ಐಡಿಯಲ್ ಕಪಲ್ ಎನ್ನುವ ಹಾಗಿದ್ದರೂ ಆದರೆ ಇಬ್ಬರೂ ವಿಚ್ಛೇದನ ಪಡೆದಿರುವುದು ಎಲ್ಲರಿಗೂ ಶಾಕ್ ಉಂಟು ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಒಂದು ಮಾತು ಎಲ್ಲವನ್ನೂ ನಿಭಾಯಿಸಬಹುದಿತ್ತು: ನಟಿ ರಮ್ಯಾ

ತುಳು ಸಿನಿಮಾಗೆ ಎಂಟ್ರಿ ಕೊಟ್ಟ ಬ್ಯಾಂಗಲ್ ಬಂಗಾರಿ ಖ್ಯಾತಿಯ ಆಂಟೋನಿ, ರೂಪೇಶ್ ಶೆಟ್ಟಿ ಸಿನಿಮಾಗೆ ಗಾಯನ

ಡಿ ಫ್ಯಾನ್ಸ್ ಅಶ್ಲೀಲ ಮೆಸೇಜ್‌: ಅಭಿಮಾನಿಗಳ ವಿರುದ್ಧ ಪೊಲೀಸ್ ಕಮಿಷನರ್‌ಗೆ ನಟಿ ರಮ್ಯಾ ದೂರು

₹72 ಕೋಟಿ ಆಸ್ತಿಯನ್ನು ಸಂಜಯ್‌ ದತ್‌ಗೆ ಬಿಟ್ಟು ಹೋದ ಮಹಿಳಾ ಅಭಿಮಾನಿ, ನಟ ಅದನ್ನೇನು ಮಾಡಿದ್ರೂ ಗೊತ್ತಾ

ಡಿ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ಸ್‌: ರಮ್ಯಾ ದೂರು ಕೊಟ್ಟರೆ ಕಾನೂನು ಕ್ರಮ ಎಂದ ಪರಮೇಶ್ವರ್‌

ಮುಂದಿನ ಸುದ್ದಿ
Show comments