Webdunia - Bharat's app for daily news and videos

Install App

ಬಾಣಂತನ ಮುಗಿಯುವ ಮೊದಲೇ ಶೋಗೆ ಯಾಕೆ ಬಂದ್ರಿ ಎಂದು ಅದಿತಿ ಪ್ರಭುದೇವಗೆ ಪ್ರಶ್ನೆ

Krishnaveni K
ಶನಿವಾರ, 8 ಜೂನ್ 2024 (13:11 IST)
ಬೆಂಗಳೂರು: ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಈಗ ಮುದ್ದಾದ ಮಗುವನ್ನು ಮನೆಯಲ್ಲಿ ಬಿಟ್ಟು ಟಿವಿ ಶೋ ಒಂದಕ್ಕೆ ತೀರ್ಪುಗಾರರಾಗಿ ಬರ್ತಿದ್ದಾರೆ. ಇದರ ಬಗ್ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರಶ್ನೆ ಮಾಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಜ ರಾಣಿ ಸೀಸನ್ 3 ಇಂದಿನಿಂದ ಆರಂಭವಾಗುತ್ತಿದೆ. ಸೃಜನ್ ಲೋಕೇಶ್, ತಾರಾ ಅನುರಾಧ ಜೊತೆಗೆ ಅದಿತಿ ಪ್ರಭುದೇವ ತೀರ್ಪುಗಾರರಾಗಿ ಹೊಸ ಎಂಟ್ರಿ ಕೊಟ್ಟಿದ್ದಾರೆ. ಇಂದು ಈ ಶೋನ ಗ್ರ್ಯಾಂಡ್ ಓಪನಿಂದ ಇದ್ದು ಈಗಾಗಲೇ ಪ್ರೋಮೋಗಳು ವೈರಲ್ ಆಗಿವೆ.

ಆದರೆ ಪ್ರೋಮೋ ನೋಡಿದ ಮಂದಿ ಅದಿತಿಗೆ ಬುದ್ಧಿಮಾತು ಹೇಳಿದ್ದಾರೆ. ಅಷ್ಟು ಚಿಕ್ಕಮಗುವನ್ನು ಬಿಟ್ಟು ಹೇಗೆ ಶೋಗೆ ಬರ್ತೀರಿ ಎಂದು ಕೆಲವರು ಕೇಳಿದರೆ ಮತ್ತೆ ಕೆಲವರು ಮಗುವಿಗೆ ನಾಲ್ಕು ತಿಂಗಳು ತುಂಬುವವರೆಗಾದರೂ ನೀವು ಮನೆಯಲ್ಲಿಯೇ ರೆಸ್ಟ್ ಮಾಡಬೇಕಿತ್ತು. ಇಲ್ಲದೇ ಹೊದರೆ ಬೆನ್ನು ನೋವು ಬರುತ್ತದೆ ಎಂದು  ಇನ್ನು ಕೆಲವರು ಬುದ್ಧಿ ಮಾತು ಹೇಳಿದ್ದಾರೆ.

ಇದರ ನಡುವೆ ಕೆಲವರಿಗೆ ಅದಿತಿ ದೇಹ ತೂಕದ ಬಗ್ಗೆಯೂ ಕಣ್ಣು ಬಿದ್ದಿದೆ. ಮೊದಲು ತೆಳ್ಳಗಿದ್ದ ಅದಿತಿ ಈಗ ಮಗುವಾದ ಮೇಲೆ ಕೊಂಚ ದಪ್ಪಗಾಗಿದ್ದಾರೆ. ಅದನ್ನೇ ಇಟ್ಟುಕೊಂಡು ಪಡ್ಡೆ ಹುಡುಗರು, ಮೊದಲು ಹೂ ಥರಾ ಇದ್ರಿ, ಈಗ ಹೂಕೋಸು ಥರಾ ಆಗಿದ್ದೀರಲ್ಲಾ ಮೇಡಂ ಎಂದು ಕಾಲೆಳೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನನ್ನ ಹೋರಾಟ ಮಹಿಳೆಯ ಮೇಲೆ ನಡೆದ ದೌರ್ಜನ್ಯದ ವಿರುದ್ಧ: ನಟಿ ರಿನಿ ಜಾರ್ಜ್‌

ಡಿಜಿಪಿ ಹುದ್ದೆಗೆ ಮರಳಿದ ನಟಿ ರನ್ಯಾ ರಾವ್‌ ಮಲ ತಂದೆಗೆ ಬಿಗ್‌ ಶಾಕ್‌

ಕೇರಳ ಕಾಂಗ್ರೆಸ್ ಯುವ ನಾಯಕನ ಮೇಲೆ ಇದೆಂಥಾ ಆರೋಪ, ನಟಿ ದೂರಿಗೆ ಪಕ್ಷ ಶಾಕ್‌

ಬರ್ತ್ ಡೇಗೆ ಪುರುಸೊತ್ತಿಲ್ಲ ಎಂದ ಡಾಲಿ ಧನಂಜಯ್: ಬಡವರ ಮಕ್ಕಳು ಈಗ ಕೈಗೇ ಸಿಗಲ್ಲ ಎಂದ ಫ್ಯಾನ್ಸ್

ಸಂಜನಾ ಬುರ್ಲಿ ಹೊಸ ಧಾರವಾಹಿಗೆ ನಾಯಕಿ, ವೀಕ್ಷಕರು ಇವರು ಬೇಡ ಅಂತಿರೋದ್ಯಾಕೆ

ಮುಂದಿನ ಸುದ್ದಿ
Show comments